Widgets Magazine

ಮದುವೆ ಓಕೆ... ಮಹೂರ್ತ ಯಾಕೆ ?

ರಾಜೇಶ್ ಪಾಟೀಲ್|
PR
ಪರಮೇಶ್ವರ್ ಶೃಂಗೇರಿ

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ಮಂಗಳಮಯವಾದ ಸಂಸ್ಕಾರ.ಗುರುಹಿರಿಯರು ಪ್ರಾಪ್ತವಯಸ್ಸಿಗೆ ಬಂದ ತಮ್ಮ ವರನಿಗೆ ಸೂಕ್ತವಾದ ವಧುವನ್ನು ಅನ್ವೇಷಿಸಿ ಸುಂದರ ದಾಂಪತ್ಯ ಜೀವನ ನಡೆಸಲೆಂಬ ಸದಾಶಯದೊಂದಿಗೆ ವಧು-ವರರಿಗೆ ಬಾಂಧವ್ಯ ಬೆಸೆಯುವ ಸುಮಧುರವಾದ ಕ್ಷಣ.

PR
ಇಂತಹ ಸುಮಧುರವಾದ ಕ್ಷಣವು ಜೀವನಪರ್ಯಂತ ಸುಖವನ್ನು ನೀಡುವಂತೆ ಮಾಡಿ, ಪರಸ್ಪರ ಅರಿಯುವಿಕೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ‘ ಸಮಯ’ ವನ್ನು ನಿಗದಿಮಾಡಲಾಗುತ್ತದೆ.

ಸಾಮಾನ್ಯವಾಗಿ ಸಪ್ತಮಸ್ಥಿತಿ, ಗ್ರಹದೆಸೆ,ಅಥವಾ ಸಪ್ತಮವನ್ನು ವೀಕ್ಷಿಸುವ ಗ್ರಹದೆಸೆ ಸಪ್ತಮಾದಿ ಪತಿಯ ದಶಾ ಭುಕ್ತಿಯಕಾಲಗಳು,ಲಗ್ನಾಧಿಪತಿಯು ಸಪ್ತಮಭಾವದಲ್ಲಿ ಸಂಚರಿಸುವಾಗ ಶುಕ್ರ ಮತ್ತು ಸಪ್ತಮಾಧಿಪತಿ ಗೋಚಾರದಲ್ಲಿ ಲಗ್ನಾಧಿಪತಿ ಸ್ಥಿತರಾಶಿ ಮತ್ತು ಅದರ ನವಾಂಶ ತ್ರಿಕೋಣದಲ್ಲಿ ಸಂಚರಿಸುವಾಗ ವಿವಾಹ ಸಮಯವನ್ನು ನಿಷ್ಕರ್ಷಿಸುತ್ತಾರೆ.


ಇದರಲ್ಲಿ ಇನ್ನಷ್ಟು ಓದಿ :