Widgets Magazine

ವೃಷಭ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

ಬೆಂಗಳೂರು| Krishnaveni K| Last Modified ಬುಧವಾರ, 23 ಜನವರಿ 2019 (08:52 IST)
ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಮೊದಲಗೆ ವೃಷಭ ರಾಶಿ ನೋಡೋಣ.
 
ವೃಷಭ ರಾಶಿಯವರಿಗೆ ತಾಳ್ಮೆ ಜಾಸ್ತಿ. ಇವರ ಈ ಸ್ವಭಾವದಿಂದಾಗಿಯೇ ಇವರ ಸುತ್ತಮುತ್ತಲಿದ್ದವರನ್ನೂ ಶಾಂತಿಯಿಂದ ಬಾಳುವಂತೆ ಮಾಡುತ್ತಾರೆ. ಇವರು ಕನ್ಯಾ ರಾಶಿಯವರನ್ನು ಮದುವೆಯಾದರಂತೂ ಸಂಸಾರ ಸ್ವರ್ಗವಾಗುತ್ತದೆ.
 
ನೀವು ನಿಮ್ಮ ಶಾಂತ ಸ್ವಭಾವದಿಂದಾಗಿ ಜತೆಗಿದ್ದವರನ್ನೂ ನಿಮ್ಮೊಡನೆ ಒಯ್ಯುವ ಸ್ವಭಾವದವರಾಗಿರುತ್ತೀರಿ. ಅದು ವೃತ್ತಿಯಿರಲಿ, ಕುಟುಂಬವಿರಲಿ. ನಿಮಗೇ ಜತೆಗೇ ಸಾಗುವುದರಲ್ಲಿ ವಿಶ್ವಾಸ ಜಾಸ್ತಿ.  ಹೀಗಾಗಿ ಈ ರಾಶಿಯವರಿಗೆ ಕನ್ಯಾ ರಾಶಿ ಹೊರತಾಗಿ ಕರ್ಕಟಕ ಮತ್ತು ಮಕರ ರಾಶಿಯವರೂ ಸರಿ ಹೊಂದುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :