ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಸೋಮವಾರ, 18 ಮಾರ್ಚ್ 2019 (09:02 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 
ಮೇಷ: ಕುಟುಂಬಕ್ಕೆ ಸಂಬಂಧಿಸಿದ ಕೆಲವು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಕಾರ್ಯಕ್ಷೇತ್ರದಲ್ಲೂ ಒತ್ತಡ ತಪ್ಪಿದ್ದಲ್ಲ. ಬಾಕಿ ಸಾಲ ಪಾವತಿ ಬಗ್ಗೆ ಆತಂಕವಾಗುವುದು. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.
 
ವೃಷಭ: ಋಣ ಬಾಧೆಯಿಂದ ಮುಕ್ತರಾಗುವಿರಿ. ಪರರಿಗೆ ಸಹಾಯ ಮಾಡುವ ಗುಣದಿಂದ ನೆರೆಹೊರೆಯವರಿಂದ ಪ್ರಶಂಸೆಗೊಳಗಾಗುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.
 
ಮಿಥುನ: ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಅವಿವಾಹಿತರಿಗೆ ಸೂಕ್ತ ವಿವಾಹ ಪ್ರಸ್ತಾಪಗಳು ಬರವುದು.  ಕೃಷಿ ಕ್ಷೇತ್ರದಲ್ಲಿರುವವರಿಗೆ ಆದಾಯ ಹೆಚ್ಚುವುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ಕರ್ಕಟಕ: ಅಂದುಕೊಂಡ ಕಾರ್ಯಗಳು ನೆರವೇರುವುದು. ಸಾಮಾಜಿಕವಾಗಿ ನಿಮ್ಮ ಕೆಲಸಗಳಿಗೆ ಮನ್ನಣೆ ಸಿಗುವುದು. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಹೆಚ್ಚುವುದು. ಮನೆಯಲ್ಲಿ ತಾಳ್ಮೆಯಿಂದ ವ್ಯವಹರಿಸುವುದು ಅಗತ್ಯ.
 
ಸಿಂಹ: ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುವುದು. ಆಸ್ತಿ, ಪಾಲು ಬಂಡವಾಳದಲ್ಲಿ ಕೋರ್ಟು ಕಚೇರಿ ಎಂದು ಅಲೆದಾಡಬೇಕಾಗುತ್ತದೆ. ಹಿತ ಶತ್ರುಗಳಿಂದ ವಂಚನೆಗೊಳಗಾಗದಂತೆ ಎಚ್ಚರವಹಿಸುವುದು ಅಗತ್ಯ.
 
ಕನ್ಯಾ: ಗೃಹೋಪಯೋಗಿ ವಸ್ತುಗಳ ಖರೀದಿಗೆ ಮುಂದಾಗುವಿರಿ. ಆದರೆ ಖರ್ಚು ವೆಚ್ಚಗಳು ಹಿಡಿತದಲ್ಲಿರಲಿ. ದುಡುಕಿನ ವರ್ತನೆ, ಮಾತಿನಿಂದ ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ಎಚ್ಚರ ಅಗತ್ಯ.
 
ತುಲಾ: ವಿಘ್ನೇಶ್ವರನ ಪ್ರಾರ್ಥನೆಯೊಂದಿಗೆ ದಿನದ ಆರಂಭ ಮಾಡಿದರೆ ಇಂದು ಅಂದುಕೊಂಡ ಕಾರ್ಯಗಳು ಸಿದ್ಧಿಯಾಗುವುದು. ಆದರೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು. ಶುಭ ಮಂಗಲ ಕಾರ್ಯ ನೆರವೇರಿಸುವುದರ ಬಗ್ಗೆ ಚಿಂತನೆ ಮಾಡುವಿರಿ.
 
ವೃಶ್ಚಿಕ: ಸಹೋದರರ ವಿವಾಹ ಸಂಬಂಧ ಓಡಾಟ ನಡೆಸಬೇಕಾಗುತ್ತದೆ. ಆದರೆ ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸಲು ಹೋದರೆ ಅಪವಾದ ತಪ್ಪದು. ವ್ಯವಹಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡಿ.
 
ಧನು: ವಿದ್ಯಾರ್ಥಿಗಳಿಗೆ ಇದು ಸತ್ವ ಪರೀಕ್ಷೆ ಕಾಲ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಕೊಡಬೇಕಾಗುತ್ತದೆ. ಬೇಡದ ಆಲೋಚನೆಗಳಿಂದ ಮನಸ್ಸು ಕೆಡಿಸಿಕೊಳ್ಳುವಿರಿ. ನೆಮ್ಮದಿಗಾಗಿ ಕುಲದೇವರ ಪ್ರಾರ್ಥಿಸಿ.
 
ಮಕರ: ವಿವಾಹಾಕಾಂಕ್ಷಿಗಳಿಗೆ ಕೆಲವು ವಿಘ್ನಗಳು ಉಂಟಾಗುವುದು. ಸುಬ್ರಹ್ಮಣ್ಯ ಸೇವೆ ಮಾಡಿ. ಯಾವುದೇ ಕೆಲಸಕ್ಕೆ ಮೊದಲು ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ. ಕಾರ್ಯಕ್ಷೇತ್ರದಲ್ಲಿ ಉದಾಸೀನ ಪ್ರವೃತ್ತಿ ತೋರುವಿರಿ.
 
ಕುಂಭ:  ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಇದ್ದರೂ ಅಂತಿಮ ಜಯ ನಿಮ್ಮದಾಗುವುದು. ಆದಾಯಕ್ಕೆ ಏನೂ ಕೊರತೆಯಾಗದು. ಆದರೆ ಅನಿರೀಕ್ಷಿತ ಖರ್ಚುಗಳು ಎದುರಾಗುವುದು.
 
ಮೀನ: ವ್ಯಾಪಾರ, ವಾಣಿಜ್ಯೋದ್ಯಮಿಗಳು ಲಾಭ ಗಳಿಸುವರು. ಉದ್ಯೋಗದಲ್ಲಿ ಮುನ್ನಡೆ ಕಾಣುವಿರಿ. ಆದರೆ ಕೌಟುಂಬಿಕವಾಗಿ ಕೆಲವೊಂದು ಭಿನ್ನಾಭಿಪ್ರಾಯಗಳು ಮನಸ್ಸಿಗೆ ಬೇಸರವುಂಟುಮಾಡುವುದು. ತಾಳ್ಮೆಯಿಂದಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             


ಇದರಲ್ಲಿ ಇನ್ನಷ್ಟು ಓದಿ :