ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಬುಧವಾರ, 20 ಮಾರ್ಚ್ 2019 (08:48 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 
ಮೇಷ: ವಿದ್ಯಾರ್ಥಿಗಳಲ್ಲಿ ಉದಾಸೀನ ಪ್ರವೃತ್ತಿ ಕಂಡುಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗಕ್ಕಾಗಿ ಅಲೆದಾಟ ತಪ್ಪದು. ಆದರೆ ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಯಶಸ್ಸು ಸಿಗುವುದು. ಆರ್ಥಿಕವಾಗಿ ಆದಾಯ ಹೆಚ್ಚುವುದು.
 
ವೃಷಭ: ಮನೆಯಲ್ಲಿ ಹಿರಿಯರ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆದಾಡಬೇಕಾದೀತು. ನೀರಿನಿಂದ ಅಪಾಯವಿದ್ದು, ಆದಷ್ಟು ಜಾಗರೂಕರಾಗಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುವುದು. ಪ್ರಯತ್ನ ಮುಂದುವರಿಸಿ.
 
ಮಿಥುನ: ದೂರ ಸಂಚಾರದಲ್ಲಿ ಅಪಘಾತ, ಕಳ್ಳತನದ ಭೀತಿಯಿದೆ. ಅಪರಿಚಿತರೊಂದಿಗೆ ಎಚ್ಚರಿಕೆಯಿಂದ ವರ್ತಿಸಿ. ವಿದ್ಯಾರ್ಥಿಗಳು ಪರಿಶ್ರಮಕ್ಕೆ ತಕ್ಕ ಫಲ ಪಡೆಯಲಿದ್ದಾರೆ. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ.
 
ಕರ್ಕಟಕ: ಹೊಸ ಕೆಲಸಗಳಿಗೆ ಹೊರಡುವ ಮುನ್ನ ಗುರು ಹಿರಿಯರ ಆಶೀರ್ವಾದ ಪಡೆಯಿರಿ. ನೆರೆಹೊರೆಯವರೊಂದಿಗೆ ಗಡಿ ತಂಟೆ ತಕರಾರುಗಳು ಎದುರಾಗಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ.
 
ಸಿಂಹ: ಪ್ರೇಮ ವಿವಾಹಕ್ಕೆ ಮನೆಯಲ್ಲಿ ಹಿರಿಯರಿಂದ ಒಪ್ಪಿಗೆ ಸಿಗಲಿದೆ. ನಿರುದ್ಯೋಗಿಗಳು ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡುವರು. ಕಚೇರಿಯಲ್ಲಿ ಸಹೋದ್ಯೋಗಿಗಳು ನಿಮ್ಮ ಮುನ್ನಡೆಗೆ ಅಸೂಯೆಪಡುವರು.
 
ಕನ್ಯಾ: ಹಿರಿಯರ ಮಾತಿಗೆ ಮನ್ನಣೆ ನೀಡಬೇಕಾಗುತ್ತದೆ. ಮನೆಯಲ್ಲಿ ಶುಭ ಕಾರ್ಯ ನೆರವೇರಿಸುವಿರಿ. ಮಕ್ಕಳ ಬಗ್ಗೆ ಪ್ರಶಂಸೆ ಕೇಳಿಬರುವುದು. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶ ಬಳಸಿಕೊಳ್ಳಬೇಕಾಗುತ್ತದೆ. ಹೆಚ್ಚಿನ ಶುಭ ಫಲಗಳಿಗೆ ದೇವತಾ ಪ್ರಾರ್ಥನೆ ಮಾಡಿ.
 
ತುಲಾ: ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ. ಕಲಾ ಕ್ಷೇತ್ರದಲ್ಲಿರುವವರಿಗೆ ಸಾಧನೆಗೆ ತಕ್ಕ ಪ್ರಶಂಸೆ ಸಿಗಲಿದೆ. ಕೃಷಿ ಕ್ಷೇತ್ರದಲ್ಲಿರುವವರು ನೀರಿಗಾಗಿ ಪರದಾಡಬೇಕಾದೀತು. ಅವಕಾಶ ಬಂದಾಗ ಕಣ್ಮುಚ್ಚಿ ಕೂರದಿರಿ.
 
ವೃಶ್ಚಿಕ: ಮಹಿಳೆಯರಿಂದ ಶುಭ ಸುದ್ದಿ ಕೇಳುವಿರಿ. ಸಂಗಾತಿಯ ಸಹಕಾರ ಸಿಗಲಿದೆ. ನೂತನ ದಂಪತಿಗಳು ಸಂತಾನ ಪ್ರಾಪ್ತಿಗಾಗಿ ದೇವರ ಮೊರೆ ಹೋಗಬೇಕಾಗುತ್ತದೆ. ದೂರ ಪ್ರಯಾಣದಲ್ಲಿ ಎಚ್ಚರಿಕೆಯಿರಲಿ.
 
ಧನು: ಈ ದಿನ ವಾಹನ, ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದರೆ ನಷ್ಟ ಅನುಭವಿಸಬೇಕಾಗುತ್ತದೆ. ಆರ್ಥಿಕ ಪರಿಸ್ಥಿತಿ ಕೊಂಚ ಹದಗೆಡುವುದು. ಕೋರ್ಟು ಕಚೇರಿ ವ್ಯವಹಾರಗಳನ್ನು ಕೆಲವು ದಿನ ಮುಂದೂಡುವುದೇ ಒಳ್ಳೆಯದು.
 
ಮಕರ: ಉದ್ಯೋಗದಲ್ಲಿ ಅಭಿವೃದ್ಧಿ, ಮುನ್ನಡೆ ತೋರಿಬರಲಿದೆ. ವಾಸ ಸ್ಥಳ ಬದಲಾವಣೆಯಾಗಲಿದೆ. ಹಿರಿಯರಿಗೆ ನಿಮ್ಮ ಮೇಲೆ ಕೊಂಚ ಅಸಮಾಧಾನ ಕಂಡುಬಂದೀತು. ಆದರೆ ಮಾತುಕತೆಯಿಂದಲೇ ಎಲ್ಲವನ್ನೂ ಬಗೆ ಹರಿಸಿ.
 
ಕುಂಭ:  ಕುಟುಂಬದಲ್ಲಿ ಮಹತ್ತರ ಜವಾಬ್ಧಾರಿಯೊಂದು ಹೆಗಲೇರಲಿದೆ. ಸಹೋದರರು ನಿಮ್ಮಿಂದ ಸಹಾಯ ನಿರೀಕ್ಷಿಸುವರು. ಏನೇ ಮಾಡಿದರೂ ನೆಂಟರಿಂದ ಚಾಡಿ ಮಾತು ತಪ್ಪದು. ಆದರೆ ಅದಕ್ಕೆ ಕಿವಿಗೊಡಬೇಕಿಲ್ಲ. ತಾಳ್ಮೆಯಿಂದಿರಿ.
 
ಮೀನ: ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಮುನ್ನಡೆ ತೋರಿಬರುವುದು. ಅತಿಯಾದ ಆತ್ಮವಿಶ್ವಾಸ ಬೇಡ. ಹಣಕಾಸಿನ ವಿಚಾರದಲ್ಲಿ ಅಪರಿಚಿತರಿಂದ ವಂಚನೆಗೊಳಗಾಗುವ ಸಂಭವವಿದೆ. ಹಾಗಾಗಿ ಲೆಕ್ಕಾಚಾರಗಳು ಸರಿಯಾಗಿರಲಿ. ಸಂಗಾತಿಯ ಮಾತಿಗೆ ಮನ್ನಣೆ ನೀಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             


ಇದರಲ್ಲಿ ಇನ್ನಷ್ಟು ಓದಿ :