Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಬುಧವಾರ, 25 ಮಾರ್ಚ್ 2020 (09:02 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ಮಾನಸಿಕವಾಗಿ ಋಣಾತ್ಮಕ ಚಿಂತನೆಗಳು ತಲೆಯಲ್ಲಿ ಓಡಾಡುತ್ತಿರುತ್ತವೆ. ಕೂತಲ್ಲೇ ಕೂತು ಸೋಮಾರಿಯಾಗಬೇಡಿ. ಹೊಸ ಚಿಂತನೆಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿ. ಅನಗತ್ಯವಾಗಿ ವಾದ ವಿವಾದ ಮೈಮೇಲೆಳೆದುಕೊಳ್ಳಬೇಡಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ವೃಷಭ: ವೃತ್ತಿರಂಗದಲ್ಲಿ ಅಧಿಕ ಧನಾರ್ಜನೆಗೆ ಕಡೆಗೆ ಗಮನ ಹರಿಯಲಿದೆ. ಹೊಸ ಮಿತ್ರರ ಸಂಪಾದನೆ ಮಾಡಲಿದ್ದೀರಿ. ಕ್ರಿಯಾತ್ಮಕ ಕೆಲಸಗಳಿಂದ ಜನಮನ್ನಣೆ ಸಿಗಲಿದೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.
 
ಮಿಥುನ: ನೂತನ ದಂಪತಿಗಳಿಗೆ ಪ್ರವಾಸಾದಿ ಸಂತೋಷ ಸಿಗಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೀರಿ. ಆರ್ಥಿಕವಾಗಿ ನಾನಾ ರೀತಿಯ ಖರ್ಚು ವೆಚ್ಚಗಳು ತೋರಿಬರಲಿವೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗದೇ ನಿರಾಸೆಯಾಗಬಹುದು.
 
ಕರ್ಕಟಕ: ಉದ್ಯೋಗ, ವಾಸಸ್ಥಳ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ. ಹಿರಿಯರಿಗೆ ವಾತ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬರಬಹುದು. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆ ಸಿಗಲಿದೆ. ವ್ಯಾಪಾರಿಗಳಿಗೆ ಲಾಭವಿಲ್ಲದಿದ್ದರೂ ನಷ್ಟವಾಗದು. ಸಂಚಾರದಲ್ಲಿ ಜಾಗ್ರತೆ ಅಗತ್ಯ.
 
ಸಿಂಹ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಉನ್ನತ ಸ್ಥಾನ ಮಾನದ ಯೋಗ. ಯಂತ್ರೋಪಕರಣಗಳ ವೃತ್ತಿಯಲ್ಲಿರುವವರಿಗೆ ಯಶಸ್ಸಿನ ಹಾದಿ ಕಠಿಣವೆನಿಸಲಿದೆ. ಇಷ್ಟ ಮಿತ್ರರ ಭೇಟಿ ಮನಸ್ಸಿಗೆ ಸಂತಸ ನೀಡಲಿದೆ. ಬಹುದಿನಗಳ ಕನಸು ನನಸು ಮಾಡಲಿದ್ದೀರಿ.
 
ಕನ್ಯಾ: ಬಿಡುವಿಲ್ಲದ ಕಾರ್ಯದೊತ್ತಡದಿಂದ ಕೊಂಚ ಬಿಡುವು ಸಿಗಲಿದೆ. ಮನೆ ಮಂದಿಯೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಮಕ್ಕಳ ವಿಚಾರದಲ್ಲಿ ಸಂತಸ ಮೂಡಲಿದೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಕಿರು ಸಂಚಾರ ಮಾಡಬೇಕಾಗುತ್ತದೆ.
 
ತುಲಾ: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಅವಕಾಶಗಳು ಒದಗಿಬರಲಿವೆ. ಕೆಳ ಹಂತದ ನೌಕರರು ಸಂಕಷ್ಟ ಎದುರಿಸಬೇಕಾಗುತ್ತದೆ. ಆದಾಯಕ್ಕೆ ಕೊರತೆಯಿರದು. ಆದರೆ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.
 
ವೃಶ್ಚಿಕ: ವೃತ್ತಿರಂಗದಲ್ಲಿ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳಿಗೆ ಕಾರ್ಯದೊತ್ತಡ ಅನುಭವಕ್ಕೆ ಬರಲಿದೆ. ಹಿರಿಯರಿಂದ ಬರುವ ಬಳವಳಿಗಳನ್ನು ಸಂರಕ್ಷಿಸಬೇಕಾದ ಹೊಣೆಗಾರಿಕೆ ಹೆಗಲಿಗೇರಲಿದೆ. ಮಹಿಳೆಯರಿಗೆ ಕಾರ್ಯದೊತ್ತಡ ಅಧಿಕವಾಗಲಿದೆ. ತಾಳ್ಮೆಯಿರಲಿ.
 
ಧನು: ಪ್ರೀತಿ ಪಾತ್ರರಿಂದ ವಿಶೇಷವಾದ ಉಡುಗೊರೆ ಪಡೆಯಲಿದ್ದೀರಿ. ನೆರೆಹೊರೆಯವರ ಚಾಡಿ ಮಾತಿಗೆ ಕಿವಿಗೊಡಬೇಕಿಲ್ಲ. ಕೌಟುಂಬಿಕವಾಗಿ ಜವಾಬ್ಧಾರಿ ಹೆಚ್ಚಲಿದೆ. ಸಹೋದರರೊಂದಿಗೆ ಮನಸ್ತಾಪವಾಗದಂತೆ ಎಚ್ಚರಿಕೆ ವಹಿಸಿ. ದೂರ ಸಂಚಾರ ಮುಂದೂಡುವುದು ಉತ್ತಮ.
 
ಮಕರ: ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನಕ್ಕೆ ಕರೆಬರಲಿದೆ. ಸ್ವಯಂ ವೃತ್ತಿಯವರಿಗೆ ಲಾಭವಾಗಲಿದೆ. ಆದರೆ ಹಿತಶತ್ರುಗಳಿಂದ ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಿ. ವಿವಾಹ ಪ್ರಸ್ತಾಪಗಳಿಗೆ ಮುನ್ನಡೆ ಸಿಗಲಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.
 
ಕುಂಭ: ಮನೆಗೆ ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ. ಮೇಲಧಿಕಾರಿಗಳೊಂದಿಗೆ ಅನಗತ್ಯ ವಾದ ವಿವಾದಕ್ಕಿಳಿಯಬೇಡಿ. ಕಾರ್ಯಕ್ಷೇತ್ರದಲ್ಲಿ ನಿರುತ್ಸಾಹ ಕಂಡುಬರಲಿದೆ. ಕಾರ್ಯನಿಮಿತ್ತ ಓಡಾಟ ನಡೆಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಮೀನ: ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ಗೃಹ ಬಳಕೆ ವಸ್ತುಗಳ ಖರೀದಿಗಾಗಿ ಧನವ್ಯಯ ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ.
ಇದರಲ್ಲಿ ಇನ್ನಷ್ಟು ಓದಿ :