ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶನಿವಾರ, 4 ಏಪ್ರಿಲ್ 2020 (09:06 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 > ಮೇಷ: ಮೇಲಧಿಕಾರಿಗಳ ನಿಜ ಬಣ್ಣ ಬಯಲಾಗಲಿದೆ. ಸಾಂಸಾರಿಕವಾಗಿ ಅನಗತ್ಯ ಕಿರಿ ಕಿರಿಗಳನ್ನು ಮೈಮೇಲೆಳೆದುಕೊಳ್ಳಬೇಡಿ. ಮೌನಕ್ಕೆ ಶರಣಾದರೆ ಲೇಸು. ಮಕ್ಕಳ ವಿಚಾರದಲ್ಲಿ ಚಿಂತೆಯಾಗಬಹುದು. ದೇವತಾ ಪ್ರಾರ್ಥನೆ ಮಾಡಿ.>   ವೃಷಭ: ಇಷ್ಟು ದಿನ ನಿಮ್ಮ ಬೆನ್ನ ಹಿಂದೆ ಸಂಚು ರೂಪಿಸುತ್ತಿದ್ದವರ ನಿಜ ಬಣ್ಣ ಬಯಲಾಗಲಿದೆ. ಆರ್ಥಿಕವಾಗಿ ಆದಾಯಕ್ಕಿಂತ ಖರ್ಚಾಗುತ್ತಿದೆ ಎಂಬ ಚಿಂತೆ ಕಾಡಲಿದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಮಹಿಳೆಯರಿಗೆ ತವರಿನ ಉಡುಗೊರೆ ನಷ್ಟವಾಗುವ ಭೀತಿ.
 
ಮಿಥುನ: ಹೆಚ್ಚಿನ ಧನಾರ್ಜನೆಗೆ ನಾನಾ ಮಾರ್ಗಗಳನ್ನು ಹುಡುಕಾಡಲಿದ್ದೀರಿ. ನಿಮ್ಮ ತೊಂದರೆಗಳ ಪರಿಹಾರಕ್ಕೆ ಸಂಗಾತಿ ನೀಡುವ ಸಲಹೆಗಳು ಉಪಯೋಗಕ್ಕೆ ಬರಲಿವೆ. ದಾಯಾದಿ ಕಲಹಗಳು ಸದ್ಯಕ್ಕೆ ನಿವಾರಣೆಯಾಗಲಿವೆ. ಗೃಹಕೃತ್ಯಗಳಲ್ಲಿ ತೊಡಗಿಸಿಕೊಳ್ಳಿ.
 
ಕರ್ಕಟಕ: ಸ್ವಯಂ ವೃತ್ತಿಯವರಿಗೆ ಅಂದುಕೊಂಡ ರೀತಿಯಲ್ಲಿ ಕೆಲಸ ಸಾಗದೇ ಚಿಂತೆಯಾಗಬಹುದು. ಧನಾರ್ಜನೆಯ ದಾರಿಗೆ ಅಡ್ಡಿ ಎದುರಾಗಲಿದೆ. ದುಂದುವೆಚ್ಚಗಳಿಗೆ ಕಡಿವಾಣ ಹಾಕಿ. ಮಾತಿನ ಮೇಲೆ ನಿಗಾ ಇರಲಿ. ನೆರೆಹೊರೆಯವರೊಂದಿಗೆ ನೀರಿಗಾಗಿ ಕಲಹವಾಗುವ ಸಾಧ‍್ಯತೆ, ಎಚ್ಚರಿಕೆಯಿರಲಿ.
 
ಸಿಂಹ: ಗೃಹ ಸಂಬಂಧೀ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಮನೆಯಲ್ಲಿ ಶಾಂತಿಗೆ ಭಂಗವಾಗುವ ಘಟನೆಗಳು ನಡೆಯಬಹುದು. ಸಂಯಮದಿಂದ ವರ್ತಿಸುವುದು ಒಳಿತು. ಹೊಸ ವಸ್ತುಗಳ ಖರೀದೀಗೆ ಕೆಲವು ದಿನ ಕಾಯುವುದು ಒಳಿತು.
 
ಕನ್ಯಾ: ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲಿತಾಂಶ ಸಿಗದೇ ನಿರಾಶೆಯಾಗಬಹುದು. ಹೊಸ ವಸ್ತುಗಳನ್ನು ಜೋಪಾನ ಮಾಡುವ ಹೊಣೆಗಾರಿಕೆ ಇರಲಿದೆ. ಹಿರಿಯರ ಸಲಹೆಗಳಿಗೆ ಕಿವಿಗೊಡಬೇಕಾಗುತ್ತದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.
 
ತುಲಾ: ಮನಸ್ಸು ಬಯಸಿದ ಕೆಲಸ ಮಾಡಲಾಗದೇ ನಿರಾಸೆಯಾಗಬಹುದು. ಮಹಿಳೆಯರಿಗೆ ಚಿನ್ನಾಭರಣಗಳನ್ನು ಜೋಪಾನ ಮಾಡುವ ಭೀತಿ. ಕೃಷಿಕರಿಗೆ ಬೆಳೆಗೆ ತಕ್ಕ ಬೆಲೆ ಸಿಗದು. ಸಂಚಾರ ಮುಂದೂಡಿಕೆಯಾಗಲಿದೆ. ಉತ್ತಮ ಸಮಯಕ್ಕಾಗಿ ಕೆಲವು ದಿನ ಕಾಯಲೇಬೇಕು.
 
ವೃಶ್ಚಿಕ: ಧಾರ್ಮಿಕವಾಗಿ ನಿಮ್ಮ ದೈವ ಭಕ್ತಿ ಪರೀಕ್ಷೆಯಾಗುವ ಕಾಲ ಎದುರಾಗಲಿದೆ. ಸಾಧು ಸಂತರ ಭೇಟಿ ಸಂಭವ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿರಲಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
 
ಧನು: ವೃತ್ತಿ ರಂಗದಲ್ಲಿ ಮೇಲ್ವರ್ಗದ ಅಧಿಕಾರಿಗಳಿಗೆ ಸಮಾಧಾನಕರ ದಿನ. ಕೆಳ ಹಂತದ ನೌಕರರಿಗೆ ಉದ್ಯೋಗ ನಷ್ಟವಾಗುವ ಭೀತಿ. ಅವಿವಾಹಿತರ ವಿವಾಹ ಮಾತುಕತೆ ಮುರಿದು ಬೀಳಲಿದೆ. ನಿರುದ್ಯೋಗಿಗಳಿಗೆ ಸ್ವ ಉದ್ಯೋಗವೇ ಲೇಸು.
 
ಮಕರ: ಸಾಂಸಾರಿಕವಾಗಿ ಹೊಸ ಜವಾಬ್ಧಾರಿಗಳನ್ನು ಹೊರಲು ಸಿದ್ಧರಾಗಬೇಕಾಗುತ್ತದೆ. ನೂತನ ದಂಪತಿಗಳು ಸುಂದರ ಕ್ಷಣ ಕಳೆಯಲಿದ್ದಾರೆ. ಪ್ರೇಮಿಗಳ ಗುಟ್ಟು ಮನೆಯವರ ಎದುರು ಬಹಿರಂಗವಾಗಬಹುದು. ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
 
ಕುಂಭ: ಮಾನಸಿಕವಾಗಿ ಬೇಡದ ಚಿಂತೆಗಳು ಕಾಡಿ ಕೆಲಸ ಕಾರ್ಯದಲ್ಲಿ ಒಂದು ರೀತಿಯ ನಿರುತ್ಸಾಹ ಕಾಡಬಹುದು. ಹಳೆಯ ಮಿತ್ರರ ಸಮಾಗಮವಾಗಲಿದೆ. ಸಂಗಾತಿಯೊಂದಿಗೆ ದುಡುಕಿ ಮಾತನಾಡಿದರೆ ಮನಸ್ತಾಪ ಗ್ಯಾರಂಟಿ. ತಾಳ್ಮೆ ಅಗತ್ಯ. ಖರ್ಚುಗಳಿಗೆ ಕಡಿವಾಣ ಹಾಕಿ.
 
ಮೀನ: ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನಕ್ಕೆ ಕರೆ ಬಾರದೇ ನಿರಾಸೆಯಾಗಬಹುದು. ಕೌಟುಂಬಿಕವಾಗಿ ಪ್ರೀತಿ ಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯಲಿದ್ದೀರಿ. ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಕುಲದೇವರ ಪ್ರಾರ್ಥಿಸಿದರೆ ನೆಮ್ಮದಿ.ಇದರಲ್ಲಿ ಇನ್ನಷ್ಟು ಓದಿ :