ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಭಾನುವಾರ, 5 ಏಪ್ರಿಲ್ 2020 (09:13 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.  
> ಮೇಷ: ಸಾಂಸಾರಿಕವಾಗಿ ಅತೀವ ಸಂಯಮ ಅಗತ್ಯ. ನಿಮ್ಮ ಕೆಲವೊಂದು ನಿರ್ಧಾರಗಳು ಕುಟುಂಬ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಬಹುದು. ಕಾರ್ಯಕ್ಷೇತ್ರದಲ್ಲಿ ಉತ್ಸಾಹದ ಕೊರತೆ ಕಂಡುಬರಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.>   ವೃಷಭ: ವಿನಾಕಾರಣ ಚಿಂತೆ ಮಾಡಿಕೊಂಡು ನಿಮ್ಮ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಇಷ್ಟಮಿತ್ರರನ್ನು ಭೇಟಿಯಾಗುವ ಭಾಗ್ಯವಿದೆ. ಅವಿವಾಹಿತರ ವಿವಾಹ ಮಾತುಕತೆ ಮುಂದೂಡಿಕೆಯಾಗಲಿದೆ. ಕೃಷಿಕರಿಗೆ ಬೆಳೆಗೆ ತಕ್ಕ ಬೆಲೆ ಸಿಗದೇ ನಿರಾಸೆಯಾಗಬಹುದು.
 
ಮಿಥುನ: ಆಸ್ತಿ ವಿವಾದಗಳಿಗೆ ಹಿರಿಯರ ಮಧ್ಯಸ್ಥಿಕೆಯಿಂದ ಪರಿಹಾರ ಕಂಡುಕೊಳ್ಳಲಿದ್ದೀರಿ. ಹೊಸ ವ್ಯವಹಾರಗಳಿಗೆ ಕೈ ಹಾಕಲು ಕೆಲವು ದಿನ ಕಾಯುವುದು ಒಳಿತು. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಿರದು. ಆದರೆ ಅಷ್ಟೇ ಖರ್ಚೂ ಆಗಲಿದೆ.
 
ಕರ್ಕಟಕ: ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ನೂತನ ದಂಪತಿಗಳಿಗೆ ಏಕಾಂತದ ಕ್ಷಣ ಸಿಗದೇ ನಿರಾಸೆಯಾಗಬಹುದು. ಹಿರಿಯರ ದೇಹಾರೋಗ್ಯದಲ್ಲಿ ಏರುಪೇರಾಗುವ ಸಂಭವ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.
 
ಸಿಂಹ: ಸರಕಾರಿ ನೌಕರರಿಗೆ ಬಿಡುವಿಲ್ಲದ ಕೆಲಸವಿರಲಿದ್ದು, ದೇಹಾಯಾಸವಾಗಲಿದೆ. ಮೇಲಧಿಕಾರಿಗಳೊಂದಿಗೆ ಅಸಮಾಧಾನವಾಗಬಹುದು. ವ್ಯವಹಾರದಲ್ಲಿ ಹಿನ್ನಡೆಯಾಗಬಹುದು. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಕನ್ಯಾ: ಅಧಿಕ ಧನಾರ್ಜನೆ ಮಾಡುವ ಮಾರ್ಗಗಳ ಬಗ್ಗೆ ಯೋಚನೆ ಮಾಡಲಿದ್ದೀರಿ. ಇಂದು ಯಾರಿಗೂ ಸಾಲ ಕೊಡಲು ಹೋಗಬೇಡಿ. ಮಕ್ಕಳೊಂದಿಗೆ ಸಂತಸದ ಕ್ಷಣ ಕಳೆಯಲಿದ್ದೀರಿ. ಹಳೆಯ ಮಿತ್ರನ ಜತೆಗಿನ ಮಾತುಕತೆ ಮನಸ್ಸಿಗೆ ಮುದ ನೀಡಲಿದೆ.
 
ತುಲಾ: ಹಿರಿಯರಿಂದ ಬಂದ ಸಂಪತ್ತು ಕಳೆದುಕೊಳ್ಳುವ ಭಯ ಕಾಡಲಿದೆ. ಕೆಳ ಹಂತದ ನೌಕರರಿಗೆ ಉದ್ಯೋಗ ನಷ್ಟವಾಗುವ ಭೀತಿ ಎದುರಾಗಲಿದೆ. ಕೌಟುಂಬಿಕವಾಗಿ ಜವಾಬ್ಧಾರಿಗಳು ಹೆಚ್ಚಲಿವೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.
 
ವೃಶ್ಚಿಕ: ಬಹುದಿನಗಳ ಕನಸು ನನಸು ಮಾಡಿಕೊಳ್ಳಲು ಪ್ರಯತ್ನ ನಡೆಸುತ್ತೀರಿ. ಆದರೆ ಸಾಕಷ್ಟು ಅಡೆತಡೆಗಳು ಎದುರಾಗಲಿವೆ. ಕುಲದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿರಿ. ಹಿರಿಯರಿಗೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
 
ಧನು: ಮಿತ್ರರೊಂದಿಗೆ ಸಂಘರ್ಷ ಬೇಡ. ನಿಮ್ಮದೇ ನಿರ್ಧಾರ ನಡೆಯಬೇಕು ಎನ್ನುವ ಹಠವಾದಿ ಧೋರಣೆಯಿಂದ ಇತರರ ಮನಸ್ಸಿಗೆ ನೋವುಂಟಾಗಬಹುದು. ಸಂಯಮದಿಂದ ವರ್ತಿಸಿ. ಸಂಗಾತಿಯೊಂದಿಗೆ ಮನಸ್ತಾಪವಾಗದಂತೆ ಎಚ್ಚರಿಕೆ ವಹಿಸಿ. ದೇವತಾ ಪ್ರಾರ್ಥನೆ ಮಾಡಿ.
 
ಮಕರ: ಹೊಸ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಸಂಗಾತಿಯೊಂದಿಗೆ ಪರಾಮರ್ಶಿಸುವುದು ಉತ್ತಮ. ವ್ಯವಹಾರದಲ್ಲಿ ಸೋಲಿನ ಭೀತಿ ಕಾಡಲಿದೆ. ಆದರೆ ಮಕ್ಕಳಿಂದ ಸಂತಸ ಅನುಭವಿಸಲಿದ್ದೀರಿ. ದೂರ ಸಂಚಾರ ಕೆಲವು ದಿನ ಮುಂದೂಡಿದರೆ ಉತ್ತಮ.
 
ಕುಂಭ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡ ಹೆಚ್ಚಾಗಲಿದೆ. ನಿಮ್ಮ ಮೇಲೆ ಹೆಚ್ಚಿನ ಜವಾಬ್ಧಾರಿಗಳಿದ್ದು ಅದನ್ನು ನಿಭಾಯಿಸಲು ಹೆಣಗಾಡಬೇಕಾಗುತ್ತದೆ. ಗೃಹ ಕೃತ್ಯಗಳಲ್ಲಿ ಮುನ್ನಡೆಯಿರಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
 
ಮೀನ: ಪ್ರಿಯತಮೆಯೊಂದಿಗೆ ಮನಸ್ತಾಪವಾಗಬಹುದು. ನೆರೆಹೊರೆಯವರೊಂದಿಗೆ ಎಚ್ಚರಿಕೆಯಿಂದ ವರ್ತಿಸಿ. ಚಾಡಿ ಮಾತುಗಳನ್ನು ಅಲಕ್ಷಿಸುವುದು ಉತ್ತಮ. ವಿದ್ಯಾರ್ಥಿಗಳಲ್ಲಿ ಆಲಸ್ಯತನ ಕಂಡುಬರುವುದು. ಕಾರ್ಯನಿಮಿತ್ತ ಓಡಾಟ ನಡೆಸಬೇಕಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :