ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಭಾನುವಾರ, 13 ಡಿಸೆಂಬರ್ 2020 (09:17 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ಔದ್ಯೋಗಿಕವಾಗಿ ನಿಮ್ಮ ಏಳಿಗೆಯನ್ನು ಯಾರೂ ತಡೆಯಲಾಗದು. ಹೊಸ ಹೊಸ ಯೋಚನೆಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಸಾಮಾಜಿಕವಾಗಿ ಜನಮನ್ನಣೆಗೆ ಪಾತ್ರರಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ತಾಳ್ಮೆಯಿರಲಿ.
 
ವೃಷಭ: ವೃತ್ತಿರಂಗದಲ್ಲಿ ಸಮಸ್ಯೆಗಳು ಬಂದಾಗ ಅದನ್ನು ಕ್ರಿಯಾತ್ಮಕವಾಗಿ ಯೋಚಿಸಿ ಬಗೆಹರಿಸಲಿದ್ದೀರಿ. ನಿಮ್ಮ ಕೆಲಸಗಳಿಗೆ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳ ಬಗ್ಗೆ ಕಡಿವಾಣವಿರಲಿ.
 
ಮಿಥುನ: ನಿರುದ್ಯೋಗಿಗಳು ನಿಮ್ಮ ಬಹುದಿನಗಳ ಕನಸಿನ ಉದ್ಯೋಗ ಪಡೆಯುವ ಹಾದಿಯಲ್ಲಿ ಯಶಸ್ಸು ಕಾಣಲಿದ್ದೀರಿ. ವಿದ್ಯಾರ್ಥಿಗಳು ಪೋಷಕರಿಗೆ ಹೆಮ್ಮೆ ತರುವ ಕೆಲಸ ಮಾಡಲಿದ್ದಾರೆ. ಕಳೆದು ಹೋದ ಸಂಬಂಧಗಳು ಮರಳಿ ಕೂಡಿಕೊಳ್ಳಲಿದೆ.
 
ಕರ್ಕಟಕ: ಹಿಂದೆ ಮಾಡಿದ್ದ ತಪ್ಪುಗಳನ್ನು ನೆನೆದು ಪರಿತಪಿಸುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಭವಿಷ್ಯದ ಯೋಜನೆಗಳ ಬಗ್ಗೆ ಸಂಗಾತಿಯೊಂದಿಗೆ ಚರ್ಚಿಸಿ ಮುನ್ನಡೆಯಿರಿ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿಯಾಗುವ ಯೋಗ ಕೂಡಿಬರಲಿದೆ.
 
ಸಿಂಹ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಲಿದ್ದು, ಬಂಧುಮಿತ್ರರ ಭೇಟಿ, ಒಡನಾಟದಿಂದ ಮನಸ್ಸಿಗೆ ಸಂತಸವಾಗಲಿದೆ. ದಾಯಾದಿ ಕಲಹಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಕೃಷಿಕರಿಗೆ ಮುನ್ನಡೆಯ ಯೋಗವಿದೆ.
 
ಕನ್ಯಾ: ನಿಮ್ಮ ಹೊಸ ಯೋಜನೆಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ. ಆದಾಯದಲ್ಲಿ ಹೆಚ್ಚಳವಾಗಲಿದ್ದು, ಆರ್ಥಿಕವಾಗಿ ಸರಿಯಾದ ಯೋಜನೆ ರೂಪಿಸುವುದು ಅಗತ್ಯ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ತುಲಾ: ಬೇರೆಯವರು ನಿಮ್ಮ ಬಗ್ಗೆ ಏನು ಹೇಳುತ್ತಾರೋ ಎಂಬ ಹಿಂಜರಿಕೆಯಲ್ಲಿ ಹೊಸ ನಿರ್ಧಾರಗಳನ್ನು ಕೈಗೊಳ್ಳಲು ಹಿಂಜರಿಯಲಿದ್ದೀರಿ. ಹಿರಿಯರ ಸಲಹೆಗಳನ್ನು ಪಾಲಿಸಿದರೆ ಉತ್ತಮ. ಕಳೆದು ಹೋದ ವಸ್ತುಗಳಿಗಾಗಿ ಹುಡುಕಾಟ ನಡೆಸಲಿದ್ದೀರಿ.
 
ವೃಶ್ಚಿಕ: ಇಂದು ನಿಮಗೆ ಸುಖ ದುಃಖ ಎರಡೂ ಸಮನಾಗಿ ಎದುರಾಗಲಿದೆ. ನಿಮ್ಮ ಪ್ರೀತಿ ಪಾತ್ರರ ಮನಸ್ಸಿಗೆ ನೋವುಂಟುಮಾಡುವ ನಿರ್ಧಾರ ತೆಗೆದುಕೊಳ್ಳಬೇಡಿ. ಆದಾಯ ಹೆಚ್ಚಳಕ್ಕೆ ನಾನಾ ದಾರಿ ಹುಡುಕಾಡಲಿದ್ದೀರಿ.
 
ಧನು: ನಿಮ್ಮ ಮಾತೇ ನಿಮಗೆ ಶತ್ರುವಾದೀತು. ನೀವು ನೀಡುವ ಕೆಲವೊಂದು ಸಲಹೆಗಳಿಂದ ಎಡವಟ್ಟುಗಳಾದೀತು. ಮೌನವಾಗಿರುವುದೇ ಲೇಸು. ಸಂಗಾತಿಯ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.
 
ಮಕರ: ನಿರ್ಧಾರಗಳನ್ನು ಕೈಗೊಳ್ಳಲು ಗೊಂದಲಗಳಾದೀತು. ಪ್ರೀತಿ ಪಾತ್ರರ ಸಲಹೆ ಪಡೆಯಿರಿ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದಿಂದ ಲಾಭ ಜಾಸ್ತಿ. ಹಣದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಗಳಿಸಿದ್ದು, ಉಳಿಕೆಯಾಗುತ್ತಿಲ್ಲ ಎಂಬ ಬೇಸರವಾದೀತು.
 
ಕುಂಭ: ಶೀತ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಿಬಂದೀತು. ಹಿರಿಯರಿಗೆ ತೀರ್ಥ ಯಾತ್ರೆಯ ಯೋಗ ಕೂಡಿಬರಲಿದೆ. ಕಚೇರಿ ಸಂಬಂಧೀ ಕೆಲಸಗಳಿಂದ ದೇಹಾಯಾಸವಾದೀತು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಮೀನ: ಪ್ರೀತಿ ಪಾತ್ರರನ್ನು ಭೇಟಿಯಾಗುವ ಯೋಗ. ಇಷ್ಟ ಭೋಜನ ಮಾಡಲಿದ್ದೀರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ. ಮಕ್ಕಳ ವಿಚಾರದಲ್ಲಿ ಚಿಂತೆಯಾಗಲಿದೆ. ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ.
ಇದರಲ್ಲಿ ಇನ್ನಷ್ಟು ಓದಿ :