ನಿಮ್ಮ ರಾಶಿಗನುಗುಣವಾಗಿ ಬಟ್ಟೆ ಧರಿಸಿ.. ಖುಷಿಯಾಗಿರಿ ಇಲ್ಲಿದೆ ಸಲಹೆ

ಬೆಂಗಳೂರು, ಬುಧವಾರ, 31 ಆಗಸ್ಟ್ 2016 (10:06 IST)



ಮೇಷ: ಮೇಷ ರಾಶಿಯ ಮಂದಿಗೆ ಮಂಗಳನು ಅಧಿಪತಿಯಾಗಿರುವುದರಿಂದ ಅವರಿಗೆ ಪ್ಯೂರ್ ಹಾಗೂ ಸಿಂಥೆಟಿಕ್ ಮಾದರಿಯ ವಸ್ತ್ರಗಳಷ್ಟೇ ಸರಿ ಹೊಂದುತ್ತವೆ. ಮೇಷ ರಾಶಿಯವರಿಗೆ ಲೆದರ್, ಬೆಳ್ಳಿ, ಕಬ್ಬಿಣದ ವಸ್ತುಗಳು ಸರಿ ಹೊಂದುವುದಿಲ್ಲ. ನೀಲಿ, ಕೆಂಪು, ಕೇಸರಿ ಬಣ್ಣದ ಬಟ್ಟೆಗಳು ಇವರಿಗೆ ಉತ್ತಮ.
 
ವೃಷಭ- ಹಸಿರು, ಬಿಳಿ, ಕಂದು ಮತ್ತಿತರ ದಟ್ಟ ಬಣ್ಣದ ಸಿಲ್ಕ್ ಬಟ್ಟೆಗಳು ಇವರಿಗೆ ಸರಿಯಾಗಿ ಹೊಂದುತ್ತವೆ. ಈ ಬಣ್ಣದ ಬಟ್ಟೆಗಳು ಸಾದಾ ಅರ್ಥಾತ್ ಡಿಸೈನ್ ರಹಿತ ಹಾಗೂ ಬಹುಬಣ್ಣದ ಲೇಯರ್‌ಗಳುಳ್ಳ ಈಗಿದ್ದರೆ ಇನ್ನೂ ಉತ್ತಮ.
 
ಮಿಥುನ- ಪರಿಶುದ್ಧ ಕಾಟನ್, ಹಾಗೂ ಲಿನೆನ್ ಬಟ್ಟೆಗಳು ಇವರಿಗೆ ಹೊಂದುತ್ತವೆ. ಹಸಿರು, ಬಿಳಿ ಇವರಿಗೆ ಅತ್ಯುತ್ತಮ. ಪ್ಲಾಟಿನಂ, ಚಿನ್ನ ಹಾಗೂ ಬೆಳ್ಳಿ ಇವರಿಗೆ ಹೊಂದಿಕೊಳ್ಳುತ್ತದೆ.
 
ಕರ್ಕ: ಕರ್ಕ ರಾಶಿಯ ಮಂದಿಗೆ ಸಿಲ್ಕ್, ಕಾಟನ್ ಹಾಗೂ ಲೆನಿನ್ ಬಟ್ಟೆಗಳು ಅತ್ಯುತ್ತಮ. ಬಿಳಿ ಬಣ್ಣದ ಬಟ್ಟೆಗಳು ಅಥವಾ ತುಂಬ ಸರಳವಾದ ಡಿಸೈನ್ ಹೊಂದಿದ ಬಟ್ಟೆಗಳು ಇವರಿಗೆ ಒಳ್ಳೆಯದು.
 
ಸಿಂಹ- ಸಿಂಹ ರಾಶಿಯ ಮಂದಿಗೆ ಕೆಂಪು, ಹಳದಿ ಹಾಗೂ ಕೇಸರಿ ಬಣ್ಣದ ಕಾಟನ್ ಬಟ್ಟೆಗಳು ಉತ್ತಮ. ಲೆದರ್, ಫೆದರ್, ಬೆಳ್ಳಿ ಹಾಗೂ ಕಬ್ಬಿಣ ಇವರಿಗೆ ಒಳ್ಳೆಯದಲ್ಲ.
ಕನ್ಯಾ - ಕಾಟನ್ ಹಾಗೂ ಲಿನೆನ್ ಬಟ್ಟೆ ಇವರಿಗೆ ಒಳ್ಳೆಯದು. ಅಗಲವಾದ ಕಟ್‌ಗಳು ಅಥವಾ ಶೇಡ್‌ಗಳಿರುವ ಬಟ್ಟೆ ಅಷ್ಟು ಒಳ್ಳೆಯದಲ್ಲ. ಬೆಳ್ಳಿ, ಪ್ಲಾಟಿನಂ ಚಿನ್ನ ಇವರಿಗೆ ಒಪ್ಪುತ್ತದೆ. ಎಮರಾಲ್ಡ್ ಒಳ್ಳೆಯದು.
 
ತುಲಾ- ತುಲಾ ರಾಶಿಯ ಮಂದಿಗೆ ಸಿಂಥೆಟಿಕ್ ಸಿಲ್ಕ್ ಬಟ್ಟೆಗಳು ಒಳ್ಳೆಯದು. ಕೆಂಪು, ಕೇಸರಿ ಬಣ್ಣದ ಬಟ್ಟೆಗಳು ಹೊಂದಿಕೆಯಾಗುವುದಿಲ್ಲ. ಬೆಳ್ಳಿ ಹಾಗೂ ಪ್ಲಾಟಿನಂ ಆಭರಣ ಕೂಡಾ ಉತ್ತಮವಲ್ಲ.
 



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಕೈಬೆರಳಲ್ಲಿ ಶಂಖು, ಶೀಪದ ಮಹತ್ವ ತಿಳಿಯಿರಿ

ಭಾರತೀಯ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಬೆರಳುಗಳಲ್ಲಿ ಚಕ್ರ, ಶಂಖು, ಕಳಶ, ಶೀಪ ಆಕಾರದ ...

news

ಯಾಕೆ ಕನಸುಗಳು ಬೀಳ್ತವೆ? ಕನಸುಗಳು ಹಾಗೂ ಭವಿಷ್ಯಕ್ಕೂ ಏನು ಸಂಬಂಧ? ಪರಿಹಾರ ಇಲ್ಲಿದೆ

ಕನಸು ಕಾಣದವರಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಎಲ್ಲರೂ ಕನಸಿನ ಲೋಕದಲ್ಲಿ ...

news

ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ

ಜಾತಕದ ಪ್ರಕಾರ ಶನಿ ನಿಮ್ಮ ರಾಶಿಯಲ್ಲಿದ್ದಾನಾ ? ಅಥವಾ ಶನಿ ನಿಮ್ಮನ್ನು ಕಾಡುತ್ತಿದ್ದಾನಾ ? ಶನಿ ಕಾಟದಿಂದ ...

news

ನಿಮ್ಮ ನಕ್ಷತ್ರಕ್ಕೆ ಅನುಗುಣವಾಗಿ ದೇವರನ್ನು ಪೂಜೆ ಮಾಡಿ

ಮಾನವ ಸಮುದಾಯದ ಸಾಮಾಜಿಕ ಹಾಗೂ ಸಾಂಸ್ಕ್ಕತಿಕ ಜೀವನದ ಸ್ವರೂಪವು ಅದರ ಮೂಲಭೂತ ಜೀವನ-ಸಿದ್ದಾಂತವನ್ನು ...