ವಾಸ್ತು ಪ್ರಕಾರ ಹಣ, ಒಡವೆ ಬಾಕ್ಸ್ ಎಲ್ಲಿ ತೆಗೆದಿಡಬೇಕು?

ಬೆಂಗಳೂರು| Krishnaveni K| Last Modified ಭಾನುವಾರ, 13 ಡಿಸೆಂಬರ್ 2020 (09:21 IST)
ಬೆಂಗಳೂರು: ನಗ-ನಗದು ಎಂಬುದು ನಮ್ಮ ಜೀವನದಲ್ಲಿ ಮುಖ್ಯವಾದ ಸೊತ್ತು. ಅದನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ. ಹಾಗಾದರೆ ಒಡವೆ ಪೆಟ್ಟಿಗೆಯನ್ನು ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿ ಇರಿಸಿದರೆ ಶುಭ?
 

ನಗ-ನಗದಿನ ಪೆಟ್ಟಿಗೆಯನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ಅಥವಾ ದಕ್ಷಿಣ ದಿಕ್ಕಿನಲ್ಲಿರುವ ಕಪಾಟಿನಲ್ಲಿ ಇರಿಸಿದರೆ ಉತ್ತಮ. ಲಾಕರ್ ನ ಬಾಗಿಲು ಉತ್ತರ ದಿಕ್ಕಿಗೆ ಇರುವುದು ಮುಖ್ಯ. ಯಾಕೆಂದರೆ ಕುಬೇರನ ಆವಾಸಸ್ಥಾನವಿರುವುದು ಉತ್ತರ ದಿಕ್ಕಿನಲ್ಲಿ. ಹೀಗಾಗಿ ಒಡವೆ ಬಾಕ್ಸ್ ಗಳನ್ನು ಇಡುವ ಮೊದಲು ಇದನ್ನು ಗಮನಿಸಿ.
ಇದರಲ್ಲಿ ಇನ್ನಷ್ಟು ಓದಿ :