ಕನ್ಯಾ - ಶಾರೀರಿಕ
ಈ ರಾಶಿಯವರ ಕೈಗಳು ಚಿಕ್ಕದಾಗಿದ್ದು,ಅಂಗೈದೊಡ್ಡದಾಗಿರುತ್ತದೆ.ಅವರ ತಲೆ ಹಾಗೂ ಹಣೆ ವಿಶಾಲವಾಗಿರುತ್ತದೆ.ಬೀಳುವುದರಿಂದ ಎಲುಬಿಗೆ ಗಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಕನ್ಯಾ - ವ್ಯವಹಾರ
ಇವರು ಪ್ರಾಮಾಣಿಕವಾಗಿ ಕೆಲಸ ಮಾಡಿದಲ್ಲಿ ಫಲ ಸುನಿಶ್ಚಿತ.ಕಲ್ಲು ಮತ್ತು ಕಬ್ಬಿಣದ ಕೆಲಸದಲ್ಲಿ ಉತ್ತಮ ಫಲವಿರುತ್ತದೆ.ಇವರಿಗೆ ಕೌಶಲ್ಯತೆ ಜಾಸ್ತಿಯಾಗಿದ್ದು ವಕೀಲರಾಗಬಹುದು.ಯಾವ ಕ್ಷೇತ್ರದಲ್ಲಿ ಮುಂದುವರಿದರೂ ಸಫಲತೆ ಕಟ್ಟಿಟ್ಟ ಬುತ್ತಿ.ಯಾವುದೇ ಕೆಲಸ ಮಾಡದಿರುವವರು ಕಲಾಕ್ಷೇತ್ರದಲ್ಲಿ ಮುಂದುವರಿದರೆ ಸಫಲತೆ ಕಾಣಬಹುದು.
ಕನ್ಯಾ - ಸಂಪತ್ತು
ಇವರು ಆರ್ಥಿಕವಾಗಿ ಪ್ರಬಲರು.ಆವಶ್ಯಕತೆಗೆ ತಕ್ಕಂತೆ ಹಣ ಕೈಸೇರುವುದು.ಇವರು ಸಾಲ ಕೇಳಲು ಇಚ್ಛಿಸುವುದಿಲ್ಲ,ಕೇಳಿದರೂ ಆಗಾಗಲೇ ತೀರಿಸಿ ಬಿಡುವರು.ಇವರು ಸಾಲ ಕೊಡುವುದಾದರೆ ಹಣ ವಾಪಾಸು ಬರುವುದಿಲ್ಲ.
ಕನ್ಯಾ - ಗುಣ
ಈ ರಾಶಿಯವರಿಗೆ ತಮ್ಮಬಗ್ಗೆ ಪೂರ್ಣ ಪ್ರಜ್ಞೆಯಿರುತ್ತದೆ.ಸಾಮಾಜಿಕ ಭೌದ್ಧಿಕ ಪ್ರಜ್ಞೆ ಇರುವುದರಿಂದ ಸಮೂಹದಲ್ಲಿ ಗುರುತಿಸಿ ಕೊಳ್ಳುತ್ತಾರೆ.
ಕನ್ಯಾ - ಜೀವನ ಭಾಗ್ಯ
ಈ ರಾಶಿಯವರ ಕಂಕಣಭಾಗ್ಯದ ನಂತರ ಉತ್ತಮ ಭವಿಷ್ಯವಿರುತ್ತದೆ.ಇವರ ವಿವಾಹದಲ್ಲಿ ತಡೆಗಳು ಕಂಡುಬರುವ ಸಾಧ್ಯತೆಯಿದ್ದು, ಮೊದಲ ವಿವಾಹ ನಿಶ್ಚಯವಾದನಂತರ ಮುರಿದುಬೀಳುವ ಸಾಧ್ಯತೆ ಇದೆ. ಕೋಪಬಂದಲ್ಲಿ ಆತ್ಮೀಯರನ್ನೂ ನೋಯಿಸುವ ಸ್ವಭಾವ ಇವರದ್ದು.
ಕನ್ಯಾ - ಅದೃಷ್ಟ ಬಣ್ಣ
ಈ ರಾಶಿಯವರಿಗೆ ಕೆಂಪು ಮತ್ತು ಸೂರ್ಯನ ಎಲ್ಲಾ ಬಣ್ಣಗಳು ಶುಭದಾಯಕ.ಈ ಬಣ್ಣಗಳ ವಸ್ತ್ರಧಾರಣೆ ಮನಶ್ಶಾಂತಿ ನೀಡುತ್ತದೆ.ಜೇಬಿನಲ್ಲಿ ಕೆಂಪುಬಣ್ಣದ ರುಮಾಲು ಇರಿಸುವುದು ಉತ್ತಮ.
ಕನ್ಯಾ - ಪ್ರೇಮ ಸಂಬಂಧ
ಪ್ರೇಮ ಸಂಬಂಧಿತ ಕಾರ್ಯಗಳಲ್ಲಿ ಇವರಿಗೆ ಸಫಲತೆ ಕಡಿಮೆಯಾಗಿರುತ್ತದೆ.ಪ್ರೇಮ ಕಾರ್ಯಗಳಲ್ಲಿ ನವೀನತೆಯ ಬೆನ್ನು ಹತ್ತಿ ಅಶುಭ,ಅನುಚಿತ ಪ್ರವೃತ್ತಿಗಳಿಗೆ ಬಲಿಯಾಗುತ್ತಾರೆ. ಈ ರಾಶಿಯ ಸ್ತ್ರೀಗಳ ಕಾಂತೀಯ ಸ್ವಭಾವದಿಂದ ಅವರನ್ನು ಸ್ವಾಧೀನ ಪಡಿಸಲು ಅವರನ್ನು ಪ್ರಶಂಸಿಸುವುದು ಅತೀ ಅಗತ್ಯ.ಅಂತವರು ಒಂದೇ ದಾರಿಯಲ್ಲಿ ಹೋಗಲು ಇಚ್ಛಿಸುವುದಿಲ್ಲ. ಈ ರಾಶಿಯ ಸ್ತ್ರೀ ಪುರುಷರು ಪ್ರೇಮ ಸಂಬಂಧಿತ ಕಾರ್ಯಗಳಲ್ಲಿ ಹೆಚ್ಚು ಆಶೆ ಹೊತ್ತಿರುತ್ತಾರೆ.
ಕನ್ಯಾ - ಇಷ್ಟ ಮಿತ್ರರು
ಈ ರಾಶಿಯವರಿಗೆ ಮೇಷ,ಕರ್ಕಾಟಕ,ಮಿಥುನ,ವೃಶ್ಚಿಕ,ಧನು,ಕನ್ಯಾ ಯಾ ಮೀನ ರಾಶಿಯವರಲ್ಲಿ ಉತ್ತಮ ಗೆಳೆತನವಿರುತ್ತದೆ.ವೃಷಭ,ತುಲಾ,ಮಕರ ಮತ್ತು ಕುಂಭ ರಾಶಿಯ ವ್ಯಕ್ತಿಗಳಿಂದ ಹಾನಿ ಸಂಭವಿಸುತ್ತದೆ. ಕುಂಭ ಮತ್ತು ವೃಷಭ ರಾಶಿಯವರೊಂದಿಗೆ ಉತ್ತಮ ಸಂಬಂಧವೇರ್ಪಡುವುದಿಲ್ಲ.ಇವರು ಸ್ನೇಹಪರರಾಗಿರುವುದರಿಂದ ಮಿತ್ರರ ಸಂಖ್ಯೆ ಜಾಸ್ತಿಯಾಗಿರುತ್ತದೆ.
ಕನ್ಯಾ - ಹವ್ಯಾಸಗಳು
ಈ ರಾಶಿಯವರಿಗೆ ನಿದ್ದೆ,ಸಿನೆಮಾ,ಒಳ್ಳೆಯ ವಸ್ತು,ಉಡುಗೆ,ಭೋಜನ ಮೊದಲಾದುವುಗಳಲ್ಲಿ ಆಸಕ್ತಿ ಇರುತ್ತದೆ.ಇವರಿಗೆ ಮಲಗಿಕೊಂಡು ಓದುವುದು ಇಷ್ಟ.ಅವರ ಮನಸ್ಸಿಗೆ ಒಪ್ಪುವ ಯಾವುದೇ ಕಾರ್ಯಗಳಲ್ಲಿ ವಿಶೇಷ ಆಸಕ್ತಿವಹಿಸುತ್ತಾರೆ.
ಕನ್ಯಾ - ವೈವಾಹಿಕ ಜೀವನ
ಈ ರಾಶಿಯವರ ಕಂಕಣಭಾಗ್ಯದ ನಂತರ ಉತ್ತಮ ಭವಿಷ್ಯವಿರುತ್ತದೆ.ಇವರ ವಿವಾಹದಲ್ಲಿ ತಡೆಗಳು ಕಂಡುಬರುವ ಸಾಧ್ಯತೆಯಿದ್ದು, ಮೊದಲ ವಿವಾಹ ನಿಶ್ಚಯವಾದನಂತರ ಮುರಿದುಬೀಳುವ ಸಾಧ್ಯತೆ ಇದೆ. ಕೋಪಬಂದಲ್ಲಿ ಆತ್ಮೀಯರನ್ನೂ ನೋಯಿಸುವ ಸ್ವಭಾವ ಇವರದ್ದು.
ಕನ್ಯಾ - ದೌರ್ಬಲ್ಯ
ಈ ರಾಶಿಯವರು ಸ್ವಯಂ ಕಷ್ಟಗಳನ್ನು ಬರಮಾಡಿಕೊಳ್ಳುತ್ತಾರೆ.ಅವರು ವರ್ತಮಾನಕ್ಕಿಂತ ಭೂತ,ಭವಿಷ್ಯಗಳ ಬಗ್ಗೆ ಚಿಂತಿಸುತ್ತಾರೆ. ತಮ್ಮಕಷ್ಟ ನಿವಾರಣೆಗಾಗಿ ಗುರುವಾರ ಉಪವಾಸ, ರಾಮ ಕೃಷ್ಣ, ಹನುಮಂತ ದೇವರ ಧ್ಯಾನ ಒಳ್ಳೆಯದು. ಗೋಧಿ, ಕೆಂಪು ಹೂ,ರಕ್ತಚಂದನ,ಮೊದಲಾದ ಕೆಂಪು ವಸ್ತುಗಳ ದಾನ ಉತ್ತಮ.
ಕನ್ಯಾ - ಅದೃಷ್ಟ ರತ್ನ
ಈ ರಾಶಿಯವರಿಗೆ ಮಾಣಿಕ್ಯ ಶುಭದಾಯಕ.ರವಿವಾರ ಚಿನ್ನದುಂಗುರದಲ್ಲಿ 3 ಮಾಣಿಕ್ಯಕಲ್ಲುಗಳನ್ನಿಟ್ಟು, ಸೂರ್ಯನನ್ನು ಧ್ಯಾನಿಸಿ ಉಂಗುರ ಬೆರಳಿಗೆ ತೊಡಿಸಬೇಕು. ಇದು ಶುಭಕರವಾಗಿರುತ್ತದೆ. ಪಾಶ್ಚಾತ್ಯ ಪದ್ದತಿಯ ಪ್ರಕಾರ ಮಾಣಿಕ್ಯದ ಬದಲು ವಜ್ರವನ್ನೂ ಧರಿಸಬಹುದು.
ಕನ್ಯಾ - ವ್ಯಕ್ತಿತ್ವ
ಈ ರಾಶಿಯವರು ಉತ್ತಮ ವ್ಯಕ್ತಿತ್ವವುಳ್ಳವರಾಗಿದ್ದು,ಇತರರನ್ನು ಆಕರ್ಷಿಸುವವರಾಗಿರುತ್ತಾರೆ.ಇವರಿಗೆ ಸತ್ಯದಲ್ಲಿ ನಂಬುಗೆ ಜಾಸ್ತಿ,ಮತ್ತು ಸುಖಜೀವನ ನಡೆಸಲು ಬಯಸುತ್ತಾರೆ.ಜೀವನವನ್ನು ಅಧಿಕವಾಗಿ ಸ್ನೇಹಿಸುತ್ತಾರೆ ಕೆಲವೊಮ್ಮೆ ಅದನ್ನು ಸಂಕಟಮಯವಾಗಿಸುತ್ತಾರೆ.
ಕನ್ಯಾ - ಶಿಕ್ಷಣ
ಈ ರಾಶಿಯವರಿಗೆ ಉನ್ನತ ಶಿಕ್ಷಣ ಪ್ರಾಪ್ತವಾಗುವುದು. ಚಿಕಿತ್ಸಾಶಾಸ್ತ್ರದ ಶಿಶು,ಹೃದಯ ವಿಭಾಗ, ಸಾಹಿತ್ಯ, ಪತ್ರಕರ್ತ, ರಾಜಕೀಯ, ಜ್ಯೋತಿಷ್ಯ ಮುಂತಾದವುಗಳಲ್ಲಿ ಇವರಿಗೆ ಸಫಲತೆ ಸಾಧಿಸಬಹುದು.
ಕನ್ಯಾ - ಆರೋಗ್ಯ
ಈ ರಾಶಿಯವರು ಬಾಹ್ಯದೃಷ್ಟಿಯಲ್ಲಿ ದುರ್ಬಲರಾಗಿದ್ದರೂ,ಹೆಚ್ಚು ಪರಿಶ್ರಮಿಗಳು. ಗಂಟಲು,ಉದರ ಸಂಬಂಧಿ ಕಾಯಿಲೆಗಳು, ಕಣ್ಣು, ಕಿವಿ, ಚರ್ಮ, ಜ್ವರದ ಕಾಟವಿರುತ್ತದೆ. ಬಾಲ್ಯದಲ್ಲಿ ರೋಗಗಳಿಂದ ಬಳಲಿದರೂ ಯೌವನದಲ್ಲಿ ಸಬಲರಾಗುತ್ತಾರೆ. ನೀರಿನ ಸೇವನೆ ಒಳ್ಳೆಯದು. ಬೆಣ್ಣೆ, ಆಲೂಗಡ್ಡೆ, ಟೊಮೇಟೊ, ಮಾವು ಇವರ ಪ್ರಿಯವಸ್ತು.
ಕನ್ಯಾ - ಗೃಹ-ಕುಟುಂಬ
ಈ ರಾಶಿಯವರು ತಮ್ಮ ಮನದಲ್ಲಿ ತಾಯಿಗೆ ಉಚ್ಛ ಸ್ಥಾನ ಕಲ್ಪಿಸುತ್ತಾರೆ. ದೈವ ವಿಶ್ವಾಸಿಗಳಾಗಿದ್ದು,ಕುಟುಂಬದ ವಿಶ್ವಾಸಕ್ಕೆ ಪಾತ್ರರಾಗಿರುತ್ತಾರೆ. ಇವರಿಗೆ ಸಹೋದರ ಸ್ನೇಹ ಪ್ರಾಪ್ತವಾಗುವುದಿಲ್ಲ. ಇವರು ಪಿತೃ ವಿರೋಧಿಗಳಾಗುವ ಸಾಧ್ಯತೆ ಇರುತ್ತದೆ.
ಕನ್ಯಾ - ಅದೃಷ್ಟದ ದಿನ
ಈ ರಾಶಿಯವರ ಶುಭದಿನ ರವಿವಾರ. ಗುರುವಾರ ಶುಭವಾಗಿದ್ದು, ಮಂಗಳವಾರ ಅಶುಭವಾಗಿದ್ದು, ಶನಿವಾರ ಮಿಶ್ರಫಲವಿರುವುದು.
ಕನ್ಯಾ - ಅದೃಷ್ಟ ಸಂಖ್ಯೆ
ಈ ರಾಶಿಯವರ ಶುಭ ಅಂಕ 1 ಮತ್ತು 4. 1, 10, 28, 37, 46, 55, 64 ಹಾಗೂ 4, 13, 22, 31, 40, 58, 67, 76 ಶುಭಕಾರಕ. ಇದಲ್ಲದೆ 2, 3, 9 ಅಂಕ ಶುಭ, 5, 6, 7, 8 ಅಂಕ ಅಶುಭವಾಗಿದೆ.