ಕೈಗಳಲ್ಲಿ ನೆರಿಗೆ ಮೂಡಿದೆಯೇ. ಚಿಂತಿಸಬೇಡಿ ಈ ವಿಧಾನ ಅನುಸರಿಸಿ ಕೈಗಳನ್ನು ಸುಂದರವಾಗಿಸಿ

ಬೆಂಗಳೂರು| pavithra| Last Modified ಬುಧವಾರ, 4 ಜುಲೈ 2018 (11:51 IST)
ಬೆಂಗಳೂರು : ನಿಮ್ಮ ದುರ್ಬಲವಾದ ಸ್ನಾಯುವಿನ ಅಂಗಾಂಶಗಳಿಂದಾಗಿ ನಿಮ್ಮಲ್ಲಿ ನೆರಿಗೆಗಳು ಕಾಣಿಸಿಕೊಳ್ಳುತ್ತದೆ. ಇದು ಮುಖದಲ್ಲಿ ಮಾತ್ರವಲ್ಲದೇ ಕೈಗಳಲ್ಲೂ ಕಂಡುಬರುತ್ತದೆ. ಇದನ್ನು ಹೋಗಲಾಡಿಸಲು ಇಲ್ಲಿದೆ ಸುಲಭ ವಿಧಾನ


ಮೊಟ್ಟೆಯ ಬಿಳಿ ಭಾಗದ ಸಹಾಯದಿಂದಾಗಿ ಚರ್ಮದ ಸ್ಥಿತಿಸ್ಥಾಪಕತ್ವವು ಹೆಚ್ಚುತ್ತದೆ ಯಾಕೆಂದರೆ ಇದರಲ್ಲಿ ಪ್ರೋಟೀನ್ ಅಂಶವಿದೆ. ಅಷ್ಟೇ ಅಲ್ಲ, ಇದು ಚರ್ಮದ ಸತ್ತ ಜೀವಕೋಶಗಳ ನಿವಾರಣೆಗೂ ಕೂಡ ಇದು ನೆರವಾಗುತ್ತದೆ.


ಮೊಟ್ಟೆಯ ಬಿಳಿಭಾಗವನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಜೇನುತುಪ್ಪವನ್ನು ಸೇರಿಸಿ. ಈ ಮಾಸ್ಕನ್ನು ನಿಮ್ಮ ಕೈಗಳಿಗೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಹಾಗೆಯೇ ಬಿಡಿ. ನಂತರ ಇದನ್ನು ತಣ್ಣನೆಯ ನೀರಿನಿಂದ ತೊಳೆಯಿರಿ. ತಿಂಗಳಿಗೆ ಮೂರು ಬಾರಿ ಈ ಮಾಸ್ಕ್ ನ್ನು ಕೈಗಳಿಗೆ ಬಳಕೆ ಮಾಡುವುದು ಒಳ್ಳೆಯದು. ಆ ಮೂಲಕ ಚರ್ಮದ ಸ್ಥಿತಿಸ್ಥಾಪಕತ್ವ ಗುಣವು ಹೆಚ್ಚಾಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :