ಮುಖದ ಕಾಂತಿ ಹೆಚ್ಚಾಗಲು ಮನೆಯಲ್ಲಿಯೇ ತಯಾರಿಸಿದ ಈ ಸೋಪ್ ಬಳಸಿ

ಬೆಂಗಳೂರು| pavithra| Last Modified ಶುಕ್ರವಾರ, 17 ಜುಲೈ 2020 (09:12 IST)
ಬೆಂಗಳೂರು : ಬೆಳ್ಳಗಾಗಬೇಕೆಂದು ಎಲ್ಲರೂ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಸೋಪ್ ಗಳನ್ನು ಬಳಸುತ್ತಾರೆ. ಇದರಿಂದ ಮುಖದ ಕಾಂತಿ ಹೆಚ್ಚುವ ಬದಲು ಇನ್ನಷ್ಟು ಕೆಡುತ್ತದೆ. ಅದರ ಬದಲು ಮನೆಯಲ್ಲಿಯೇ ಈ ಫೇಸ್ ವಾಶ್ ಸೋಪ್ ತಯಾರಿಸಿ.

ಮಿಕ್ಸಿ ಜಾರಿಗೆ ಸ್ವಲ್ಪ ಬೇವಿನ ಎಲೆ , ಸ್ವಲ್ಪ ತುಳಸಿ ಎಲೆ ಹಾಕಿ ನೀರು ಹಾಕದೆ ರುಬ್ಬಿ. ಇದನ್ನು ಒಂದು ಕಪ್ ಗೆ ಹಾಕಿ ಅದಕ್ಕೆ ನಿಂಬೆ ಹಣ್ಣಿನ ಸಿಪ್ಪೆ ತುರಿದು ಹಾಕಿ, ಹಾಗೇ 1 ಚಮಚ ನಿಂಬೆರಸ ಹಾಕಿ, ¼ ಚಮಚ ಹಾಕಿ. ಬಳಿಕ ಇನ್ನೊಂದು ಕಪ್ ಗೆ ಗ್ಲಿಸರಿನ್ ಸೋಪ್ ನ್ನು ತುರಿದುಕೊಳ್ಳಿ ಅದನ್ನು ಬಿಸಿ ನೀರಿನಲ್ಲಿ ಇಟ್ಟು ಕರಗಿಸಿ ಅದಕ್ಕೆ ತುರಿದ ವಸ್ತುಗಳನೆಲ್ಲಾ ಹಾಕಿ ಅದಕ್ಕೆ ಟ್ರೀಟ್ರೀ ಆಯಿಲ್ 5 ಹನಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬಳಿಕ ಕಪ್ ಗಳಿಗೆ ಸುರಿಯಿರಿ. 15 ನಿಮಿಷದ ಬಳಿಕ ಸೋಪ್ ರೆಡಿಯಾಗಿರುತ್ತದೆ. ಈ ಸೋಪ್ ನಿಂದ ಮುಖ ವಾಶ್ ಮಾಡಿದರೆ ಮುಖದ ಕಾಂತಿ ಹೆಚ್ಚುತ್ತದೆ.
  


ಇದರಲ್ಲಿ ಇನ್ನಷ್ಟು ಓದಿ :