ಒಳ್ಳೆಯ ಗಂಡ ಸಿಗಬೇಕೆಂದರೆ ಮಹಿಳೆಯರು ತುಳಸಿ ಗಿಡದ ಮುಂದೆ ಈ ಪೂಜೆ ಮಾಡಬೇಕು

ಬೆಂಗಳೂರು| Krishnaveni K| Last Modified ಬುಧವಾರ, 2 ಜನವರಿ 2019 (09:21 IST)
ಬೆಂಗಳೂರು: ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ತಮಗೆ ಒಳ್ಳೆಯ, ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ ಗಂಡ ಸಿಗಲೆಂದು ಪ್ರಾರ್ಥನೆ ಮಾಡುವುದು ಸಾಮಾನ್ಯ.
 
ಒಳ್ಳೆಯ ಪತಿ ಸಿಗಬೇಕಾದರೆ ಅದೃಷ್ಟದ ಜತೆಗೆ ದೈವಬಲವೂ ಬೇಕು. ಅದಕ್ಕಾಗಿ ಮಹಿಳೆಯರು ತುಳಸಿ ಪೂಜೆ ಮಾಡಿದರೆ ಉತ್ತಮ.
 
ಪ್ರತಿ ನಿತ್ಯ ಅದರಲ್ಲೂ ವಿಶೇಷವಾಗಿ ಕೃಷ್ಣ ತುಳಸಿ ಗಿಡದ ಮುಂದೆ ದೀಪ ಹಚ್ಚಿ ಮೂರು ಸುತ್ತು ಪ್ರದಕ್ಷಿಣೆ ಬಂದು ಭಕ್ತಿಯಿಂದ ನಮಸ್ಕರಿಸುವುದರಿಂದ ಉತ್ತಮ ಸಂಗಾತಿ ಸಿಗುತ್ತಾನೆ. ಅದೇ ರೀತಿ ವೈವಾಹಿಕ ಜೀವನ ಸುಖಕರವಾಗಿರಬೇಕಾದರೂ ಈ ರೀತಿ ಮಾಡುವುದದರಿಂದ ತುಳಸಿ ದೇವಿಯ ಅನುಗ್ರಹ ಮುತ್ತೈದೆಗೆ ಸಿಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :