ಶೇಖರ್ ಕಪೂರ್ ಗರಡಿಗೆ ಕಿಂಗ್ ಖಾನ್

IFM
ಮೊಬೈಲ್ ಸೇವೆಗಳಿಂದ ಹಿಡಿದು, ಬಿಸ್ಕಿಟ್ ಕಂಪನಿಗಳ ಜಾಹಿರಾತಿನಲ್ಲಿ ಕಾಣಿಸಿಕೊಂಡ ಕಿಂಗ್ ಖಾನ್ ಶಾಹರುಖ್ ಖಾನ್, ಇನ್ನು ಕೆಲವೇ ದಿನಗಳಲ್ಲಿ ಜೆಟ್ ಏರವೇಸ್ ವಿಮಾನ ಕಂಪನಿಯೊಂದರ ಜಾಹಿರಾತಿನಲ್ಲಿ ನಟಿಸಿ, ತನ್ನ ಅಭಿಮಾನಿಗಳಿಗೆ ವಿಮಾನ ಏರುವ ಆಹ್ವಾನ ನೀಡಲಿದ್ದಾರೊ ಇಲ್ಲವೊ ಗೊತ್ತಿಲ್ಲ.

ಆದರೆ ಈ ಜಾಹಿರಾತಿನ ಇನ್ನೊಂದು ವಿಶೇಷತೆ ಎಂದರೆ, ಭಾರತೀಯ ಮೂಲದ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ಚಲನ ಚಿತ್ರ ನಿರ್ದೇಶಕ ಶೇಖರ ಕಪೂರ್, ಜಾಹಿರಾತು ನಿರ್ದೇಶನಕ್ಕೆ ಸಿದ್ದವಾಗಿದ್ದಾರೆ ಅಂದ ಮೇಲೆ ಜಾಹಿರಾತಿನ ಮಟ್ಟ ಮತ್ತು ಬಜೆಟ್ ಏನು ಎನ್ನುವುದು ಗೊತ್ತಾಗಬಹುದು.

ಈಗಷ್ಟೆ ಕೆಲವು ದಿನಗಳ ಹಿಂದೆ ಶೇಖರ್ ಕಪೂರ್ ಅವರು ತಮ್ಮ ನಿರ್ದೇಶನದ ಎಲಿಜಾಬೇಥ್- ಗೊಲ್ಡನ್ ಏಜ್ ಚಿತ್ರವನ್ನು ಬಿಡುಗಡೆ ಮಾಡಿದ್ದು. ಸದ್ಯ ಟಿ ವಿ ದಾರಾವಾಹಿಗಳ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಜಾಹಿರಾತಿನ ಕೆಲ ತುಣುಕುಗಳನ್ನು ಚಿತ್ರಿಕರಿಸಲಾಗಿದ್ದು ಉಳಿದ ಭಾಗ ಮುಕ್ತಾಯದ ನಂತರ ಶೇಖರ್ ಕಪೂರ್ ತಮ್ಮ ಉಳಿದ ಕೆಲಸಗಳತ್ತ ಗಮನ ಹರಿಸುವ ಸಾಧ್ಯತೆ ಇದೆ.

ಮುಂಬೈ | ನಾಗೇಂದ್ರ ತ್ರಾಸಿ|
ಶಾಹರುಖ್ ಅವರು ಜೆಟ್ ಏರ್ ವೇಸ್‌ನ ಮಂಡಳಿಯಲ್ಲಿ ಇದ್ದು ಅವರೇ ಈಗ ತಮ್ಮದೇ ಕಂಪನಿಯ ಜಾಹಿರಾತಿನಲ್ಲಿ ನಟಿಸುವುದಕ್ಕೆ ಖುಷಿಯಿಂದ ಒಪ್ಪಿಕೊಂಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :