Widgets Magazine

ಅಭಿಷೇಕ್ ಮಾಡಿದ ಟ್ವೀಟ್ ನಿಂದ ಐಶ್ವರ್ಯಾ ರೈ ಬಗ್ಗೆ ಹುಟ್ಟಿಕೊಂಡಿದೆ ಹೀಗೊಂದು ರೂಮರ್!

ಮುಂಬೈ| Krishnaveni K| Last Modified ಬುಧವಾರ, 22 ಜನವರಿ 2020 (09:33 IST)
ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ನಿನ್ನೆ ಬೆಳಿಗ್ಗೆ ಮಾಡಿದ ಟ್ವೀಟ್ ಒಂದು ಪತ್ನಿ ಐಶ್ವರ್ಯಾ ಬಗ್ಗೆ ರೂಮರ್ ಹಬ್ಬಲು ಕಾರಣವಾಗಿದೆ. ಅಷ್ಟಕ್ಕೂ ಅಭಿಷೇಕ್ ಅಂತಹದ್ದೇನು ಟ್ವೀಟ್ ಮಾಡಿದರು ಗೊತ್ತಾ?

 
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅಭಿಷೇಕ್ ತಮ್ಮ ಜೀವನದಲ್ಲಿ ಏನೇ ಸ್ಪೆಷಲ್ ಇದ್ದರೂ ಟ್ವೀಟ್ ಮಾಡಿ ಹಂಚಿಕೊಳ್ಳುತ್ತಾರೆ. ಅದೇ ರೀತಿ ಅಭಿಷೇಕ್ ನಿನ್ನೆ ಟ್ವೀಟ್ ಮೂಲಕ ನಿಮಗೆಲ್ಲರಿಗೂ ಒಂದು ಸರ್ಪ್ರೈಸ್ ಕಾದಿದೆ. ಕಾದು ನೋಡಿ ಎಂದು ಟ್ವೀಟ್ ಮಾಡಿದ್ದೇ ತಡ.
 
ಟ್ವಿಟರಿಗರು ಸರ್ಪ್ರೈಸ್ ಎಂದರೆ ಐಶ್ವರ್ಯಾ ತಾಯಿಯಾಗುತ್ತಿದ್ದಾರಾ? ನೀವು ಎರಡನೇ ಮಗುವಿಗೆ ತಂದೆಯಾಗುತ್ತಿದ್ದೀರಾ ಎಂದೆಲ್ಲಾ ರೂಮರ್ ಹರಡಲು ಪ್ರಾರಂಭಿಸಿದ್ದಾರೆ. ಆದರೆ ಈ ರೀತಿ ಎಲ್ಲರೂ ಕಾಮೆಂಟ್ ಮಾಡುವುದು ನೋಡಿದ ಅಭಿಷೇಕ್ ಬಚ್ಚನ್ ಗೆ ತಲೆಬಿಸಿ ಆಗಿರಬೇಕು. ಅದಕ್ಕೇ ಯಾರೋ ಅಮಿತಾಭ್ ಬಚ್ಚನ್ ಅವರ ಝೂಂಡ್ ಟ್ರೈಲರ್ ಬಗ್ಗೆ ಹೇಳುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಕೂಡಲೇ ಥಮ್ಸ್ ಅಪ್ ಮಾಡಿ ಹೌದು ಎಂದು ಸುಳಿವು ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :