ಮಗ ಮಾಡಿದ ತಪ್ಪಿಗೆ ಶಾರುಖ್ ಖಾನ್ ಗೆ ಸಂಕಷ್ಟ

ಮುಂಬೈ| Krishnaveni K| Last Modified ಬುಧವಾರ, 13 ಅಕ್ಟೋಬರ್ 2021 (11:07 IST)
ಮುಂಬೈ: ಮಗ ಅರ್ಯನ್ ಖಾನ್ ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡ ಮೇಲೆ ಶಾರುಖ್ ಖಾನ್ ಬ್ರ್ಯಾಂಡ್ ಮೌಲ್ಯಕ್ಕೆ ಕುತ್ತು ಬಂದಿದೆ.
 > ಈಗಾಗಲೇ ಬೈಜೂಸ್ ಆಪ್ ಶಾರುಖ್ ಕಾಣಿಸಿಕೊಂಡಿರುವ ಜಾಹೀರಾತಿಗೆ ಕತ್ತರಿ ಹಾಕಿದೆ. ಮಗನ ಕೇಸ್ ನಿಂದಾಗಿ ಶಾರುಖ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಗೊಳಗಾಗಿದ್ದಾರೆ.>   ಹೀಗಾಗಿ ಪ್ರಮುಖ ಬ್ರ್ಯಾಂಡ್ ಗಳ ಅವರ ಜಾಹೀರಾತಿಗೆ ಕತ್ತರಿ ಹಾಕುತ್ತಿವೆ. ಇದರಿಂದಾಗಿ ಅವರ ಬ್ರ್ಯಾಂಡ್ ವಾಲ್ಯೂ ಕುಸಿಯುತ್ತಿದ್ದು, ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :