ಬುಧವಾರದವರೆಗೂ ಶಾರುಖ್ ಪುತ್ರನಿಗೆ ಜೈಲೇ ಗತಿ

ಮುಂಬೈ| Krishnaveni K| Last Modified ಸೋಮವಾರ, 11 ಅಕ್ಟೋಬರ್ 2021 (17:08 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡು ನ್ಯಾಯಾಂಗ ವಶದಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಬುಧವಾರದವರೆಗೆ ಜೈಲೇ ಗತಿಯಾಗಿದೆ.
 > ಆರ್ಯನ್ ಪರ ವಕೀಲರು ಜಾಮೀನಿಗಾಗಿ ನ್ಯಾಯಾಲಯದಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದರು. ಆದರೆ ಇದರ ಸಂಬಂಧ ಎನ್ ಸಿಬಿ ಪ್ರತಿಕ್ರಿಯೆ ನೀಡಲು ನ್ಯಾಯಾಲಯ ಬುಧವಾರದವರೆಗೆ ಸಮಯ ನೀಡಿದೆ.>   ಹೀಗಾಗಿ ಅದಾದ ಬಳಿಕ ಎನ್ ಸಿಬಿ ಪ್ರತಿಕ್ರಿಯೆ ಕೇಳಿಕೊಂಡು ಬಳಿಕವಷ್ಟೇ ಜಾಮೀನು ನೀಡಬೇಕೇ, ಬೇಡವೇ ಎಂಬ ಬಗ್ಗೆ ನ್ಯಾಯಾಲಯ ತೀರ್ಮಾನ ತೆಗೆದುಕೊಳ್ಳಲಿದೆ. ಪ್ರತಿಕ್ರಿಯೆ ಕೊಡಲು ಎನ್ ಸಿಬಿ ಸಮಯಾವಕಾಶ ಕೇಳಿರುವುದರಿಂದ ಅಲ್ಲಿಯವರೆಗೆ ಆರ್ಯನ್ ಜೈಲಿನಲ್ಲೇ ಕಾಲ ಕಳೆಯಬೇಕಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :