ಕಾಜಲ್ ಹನಿಮೂನ್ ಗಾಗಿ ಖರ್ಚು ಮಾಡಿದ ಹಣವೆಷ್ಟು ಗೊತ್ತಾ?

ಹೈದರಾಬಾದ್| pavithra| Last Modified ಗುರುವಾರ, 19 ನವೆಂಬರ್ 2020 (10:40 IST)
ಹೈದರಾಬಾದ್ : ಸ್ಟಾರ್ ನಾಯಕಿ ಕಾಜಲ್ ಅಗರ್ವಾಲ್ ಅವರು ಉದ್ಯಮಿ ಗೌತಮ್ ಅವರ ಜೊತೆ ಅ.30ರಂದು ವಿವಾಹವಾಗಿದ್ದಾರೆ. ಪ್ರಸ್ತುತ ಈ ದಂಪತಿ ಇದೀಗ ಮಾಲ್ಡೀವ್ಸ್ ಹನಿಮೂನ್ ನಲ್ಲಿದ್ದಾರೆ. ಅವರ  ಹನಿಮೂನ್ ಫೋಟೊಗಳು, ವಿಡಿಯೋಗಳು ಅಂತರ್ ಜಾಲದಲ್ಲಿ ಈಗಾಗಲೇ ವೈರಲ್ ಆಗುತ್ತಿದೆ.

ಇದೀಗ ಹರಿದಾಡುತ್ತಿರುವ  ಸುದ್ದಿ ಏನೆಂದರೆ ನಟಿ ಕಾಜಲ್ ಹನಿಮೂನ್ ಗಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಾರೆ ಎಂದು ಬಾಲಿವುಡ್ ಮಾಧ್ಯಮದಲ್ಲಿ ಪ್ರಕಟಿಸಲಾಗಿದೆ. ಇವರು ಆಂಡರ್ ವಾಟರ್ ಹೋಟೆಲ್ ನಲ್ಲಿ ತಂಗಿದ್ದಾರೆ ಎನ್ನಲಾಗಿದೆ. ಒಟ್ಟಾರೆ  ಹನಿಮೂನ್ ಗಾಗಿ ಅವರು 38 ಲಕ್ಷ ರೂ.ಹಣ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಅವರು ಅಷ್ಟು ಖರ್ಚು ನಿಜವಾದರೆ ಇದು ತುಂಬಾ ವಿಶೇಷ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :