Widgets Magazine

ಫಿಲ್ಮ್ ಶೂಟಿಂಗ್ ನಲ್ಲಿ ಕ್ರಿಕೆಟ್ ಚೆಂಡು ತಗುಲಿ ಮುಖ ಊದಿಸಿಕೊಂಡ ನಟ

ಮುಂಬೈ| Jagadeesh| Last Modified ಶನಿವಾರ, 11 ಜನವರಿ 2020 (17:03 IST)

ಫಿಲ್ಮ್ ಶೂಟಿಂಗ್ ನಡೆಯುತ್ತಿರುವಾಗ ಕ್ರಿಕೆಟ್ ಚೆಂಡು ಮುಖಕ್ಕೆ ಜೋರಾಗಿ ತಗುಲಿದ ಪರಿಣಾಮ ನಟನೊಬ್ಬನ ಮುಖ ಊದಿಕೊಂಡು ಗಾಯವಾಗಿದೆ.

 

ಜೆರ್ಸಿ ಚಿತ್ರದ ಶೂಟಿಂಗ್ ವೇಳೆ ಕ್ರಿಕೆಟ್ ಆಟದ ದೃಶ್ಯ ಚಿತ್ರೀಕರಣ ಸಂದರ್ಭದಲ್ಲಿ ಪಾಲ್ಗೊಂಡಿದ್ದ ನಟ ಶಾಹಿದ್ ಕಪೂರ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕ್ರಿಕೆಟ್ ಆಡೋವಾಗ ಬಾಲ್ ಮುಖಕ್ಕೆ ತಗುಲಿದ ಪರಿಣಾಮ ಶಾಹಿದ್ ಕಪೂರ್ ತುಟಿ ಭಾಗದಲ್ಲಿ ಗಂಭೀರ ಪೆಟ್ಟಾಗಿದ್ದು, ಹತ್ತಕ್ಕೂ ಹೆಚ್ಚು ಹೊಲಿಗೆಗಳು ಬಿದ್ದಿವೆ.

ಶಾಹಿದ್ ಕಪೂರ್ ಗೆ ಚಿಕಿತ್ಸೆ ಮುಂದುವರಿದಿದ್ದು, ಚಿತ್ರೀಕರಣದಿಂದ ಕೊಂಚ ಬಿಡುವು ಪಡೆದುಕೊಳ್ಳುವಂತಾಗಿದೆ. ಅಂದ್ಹಾಗೆ ಚಂಡೀಗಢದಲ್ಲಿ ಈ ಘಟನೆ ನಡೆದಿದೆ.

 

 

ಇದರಲ್ಲಿ ಇನ್ನಷ್ಟು ಓದಿ :