ಸೈನಾ ನೆಹ್ವಾಲ್ ಗಾಗಿ ಎರಡು ವಾರ ಮೈದಾನದಲ್ಲೇ ಕಳೆಯಲಿದ್ದಾರೆ ನಟಿ ಪರಿಣಿತಿ ಚೋಪ್ರಾ

ಮುಂಬೈ| Krishnaveni K| Last Updated: ಬುಧವಾರ, 6 ನವೆಂಬರ್ 2019 (15:54 IST)
ಮುಂಬೈ: ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನಾಧಾರಿತ ಸಿನಿಮಾವೊಂದು ಹೊರಬರುತ್ತಿದ್ದು ಅದರಲ್ಲಿ ನಟಿ ಪರಿಣಿತಿ ಚೋಪ್ರಾ ಸೈನಾ ಪಾತ್ರ ಮಾಡಲಿದ್ದಾರೆ.

 
ಈ ಸಿನಿಮಾದಲ್ಲಿ ಸೈನಾ ನೆಹ್ವಾಲ್ ಪಾತ್ರ ಮಾಡಲು ಪರಿಣಿತಿ ಸಾಕಷ್ಟು ಶ್ರಮಪಡುತ್ತಿದ್ದಾರೆ. ಅದಕ್ಕಾಗಿ ಬ್ಯಾಡ್ಮಿಂಟನ್ ಕೂಡಾ ಕಲಿಯುತ್ತಿದ್ದಾರೆ.
 
ಸಿನಿಮಾ ಆದಷ್ಟು ನೈಜವಾಗಿ ಬರಬೇಕೆಂದು ಪರಿಣಿತಿ ಈಗ ಮುಂಬೈನ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಹದಿನೈದು ದಿನಗಳ ಕಾಲ ಕಳೆಯಲಿದ್ದಾರೆ. ಅಲ್ಲಿಯೇ ಇದ್ದು ಬ್ಯಾಡ್ಮಿಂಟನ್ ತರಬೇತಿ ಪಡೆಯಲಿದ್ದಾರೆ. ಸೈನಾ ಆಡುವ ರೀತಿಯನ್ನು ಕರಗತ ಮಾಡಿಕೊಳ್ಳಲಿದ್ದಾರೆ. ಇದಲ್ಲವೇ ವೃತ್ತಿಪರತೆ ಎಂದರೆ?ಇದರಲ್ಲಿ ಇನ್ನಷ್ಟು ಓದಿ :