ತಾಯಿಯಾಗುತ್ತಿರುವ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ

ಮುಂಬೈ| Krishnaveni K| Last Modified ಬುಧವಾರ, 24 ನವೆಂಬರ್ 2021 (17:11 IST)
ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಗರ್ಭಿಣಿಯಾಗಿರುವ ವಿಚಾರ ಇದೀಗ ಹೊರಬಿದ್ದಿದೆ. ಸ್ವತಃ ಪ್ರಿಯಾಂಕ ಶೋ ಒಂದರಲ್ಲಿ ಈ ಸಿಹಿ ಸುದ್ದಿಯನ್ನು ಹೊರಹಾಕಿದ್ದಾರೆ.

ಅಮೆರಿಕನ್ ಸಿಂಗರ್ ನಿಕ್ ಜೊನಾಸ್ ಜೊತೆಗೆ 2018 ರಲ್ಲಿ ಹಸೆಮಣೆ ಏರಿದ್ದ ಪ್ರಿಯಾಂಕ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿಕೊಂಡಿದ್ದಾರೆ.


ವಿಚಿತ್ರವೆಂದರೆ ಎರಡು ದಿನಗಳ ಹಿಂದೆ ಪ್ರಿಯಾಂಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜೊನಾಸ್ ಹೆಸರು ಕೈ ಬಿಟ್ಟಿದ್ದರಿಂದ ಇಬ್ಬರ ನಡುವೆ ವೈಮನಸ್ಯವೇರ್ಪಟ್ಟಿದೆ ಎಂಬ ವದಂತಿ ಹರಡಿತ್ತು. ಇದೀಗ ಪ್ರಿಯಾಂಕ ಆ ಎಲ್ಲಾ ವದಂತಿಗಳನ್ನು ತಳ್ಳಿ ಹಾಕಿ ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಖುಷಿ ಸುದ್ದಿ ಕೊಟ್ಟಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :