ಬಾಲಿವುಡ್​ನ ಪ್ರೇಮಪಕ್ಷಿಗಳು ಒಂದಾಗೋ ಸಮಯ ಬಂದಿದೆ?

ಮುಂಬೈ| Ramya kosira| Last Modified ಬುಧವಾರ, 24 ನವೆಂಬರ್ 2021 (16:01 IST)ಬಾಲಿವುಡ್ನ ಪ್ರೇಮಪಕ್ಷಿಗಳಾದ ನಟ ವಿಕ್ಕಿ ಕೌಶಲ್ ಹಾಗೂ ನಟಿ ಕತ್ರಿನಾ ಕೈಫ್ ಇದೇ ಡಿಸೆಂಬರ್ ಮೊದಲ ವಾರದಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ.
ಆದ್ರೆ ಈ ಬಗ್ಗೆ ಇಬ್ಬರೂ ಎಲ್ಲೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಷ್ಟೇ ಅಲ್ಲ, ತಾವು ಪ್ರೀತಿಯಲ್ಲಿರುವ ಬಗ್ಗೆಯೂ ಸ್ಪಷ್ಟನೆ ನೀಡಿಲ್ಲ. ಈ ವದಂತಿಗೆಲ್ಲಾ ಪುಷ್ಟಿ ಕೊಡುವಂತೆ ನಟ ಆಯುಷ್ಮಾನ್ ಖುರಾನಾ ರೇಡಿಯೋ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಸದ್ಯ ಕ್ಯಾಟ್- ವಿಕ್ಕಿ ಮದುವೆಯಾಗೋದು ಪಕ್ಕಾ ಎನ್ನಲಾಗಿದೆ. ನಟ ಆಯುಷ್ಮಾನ್ ಬಾಲಿವುಡ್ ಜೋಡಿಗಳ ಬಗ್ಗೆ ಮಾತನಾಡುತ್ತಾ, ವಿಕ್ಕಿ- ಕತ್ರಿನಾ ಪ್ರೀತಿಯಲ್ಲಿರೋದು ನಿಜ. ಈ ವಿಷಯವನ್ನ ಹೇಳ್ಬಿಟ್ಟೇ ಆದ್ರೆ ಮುಂದೇನಾಗುತ್ತೋ ಗೊತ್ತಿಲ್ಲ ಅಂತ ನಕ್ಕಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :