ಕಾಫಿ ಬೆಳೆದು ಬಂದ ಬಗೆ...

WD
ಬೀಜದಿಂದ ಆರಂಭವಾಗಿ ಕಪ್ ಸೇರಿಕೊಳ್ಳುವವರೆಗೆ ಕಾಫಿ ಬೀನ್‌ನ ಪ್ರಯಾಣವು ವಿಸ್ಮಯಕಾರಿಯಾದುದು. ಶೃಂಗಾರಮಯ ವಾತಾವರಣ ನೀಡುವ ಅಥವಾ ಇನ್ನೂ ಉತ್ತಮ ಕಾಫಿ ತಯಾರಿಗೆ ಸಲಹೆ ನೀಡುವ ಯಾವುದೇ ವಿಷಯವಾಗಲೀ ಕಾಫಿ ಸೇವಿಸುವವರಿಗೆ ಒಟ್ಟಾರೆ ಕಾಫಿ ಸೊಗಡಿನ ಅನುಭವವನ್ನು ಹೆಚ್ಚಿಸುತ್ತದೆ.

ಕಳೆದ ದಶಕದಲ್ಲಿ, ಭಾರತದಲ್ಲಿ ಕಾಫಿಯ ವ್ಯಾಪಾರ ಹಾಗೂ ಬಳಕೆಯಲ್ಲಿ ಸಾಕಷ್ಟು ಸ್ಥಿತ್ಯಂತರವಾಗಿದೆ. 1996 ರಲ್ಲಿ ಕಾಫಿ ಉದ್ಯಮಕ್ಕೆ ತರಲಾದ ಉದಾರೀಕರಣದಿಂದಾಗಿ ಗ್ರೀನ್ ಕಾಫಿಯನ್ನು ದೇಶೀಯವಾಗಿ ಬಳಸುವ ಹಾಗೂ ವಿದೇಶಕ್ಕೆ ರಫ್ತುಗೊಳಿಸುವ ರೀತಿಯಲ್ಲಿ ಮಹತ್ತರ ಬದಲಾವಣೆ ಉಂಟಾಗಿದೆ. ರೀಟೇಲ್ ಮಾರಾಟ ರಂಗದಲ್ಲಿ ಉದ್ಯಮಶೀಲತೆಗೆ ದೊರಕಿದ ಉತ್ತೇಜನದಿಂದಾಗಿ ಭಾರತದ ನಗರ ಪ್ರದೇಶಗಳಲ್ಲಿ ನೂರಾರು ಕೆಫೆಗಳು ಸ್ಥಾಪನೆಗೊಂಡು ರೀಟೇಲ್ ಉದ್ಯಮದ ನಕ್ಷೆಯನ್ನೇ ಬದಲಾಯಿಸಿಬಿಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ, ಭಾರತೀಯ ಕಂಪನಿಗಳು ಸಾಧಿಸಿದ ಯಶಸ್ವಿಯಿಂದಾಗಿ ವಿದೇಶೀ ಬಂಡವಾಳ ಹೂಡಿಕೆದಾರರು ಕಾಫಿ ಮಾರುಕಟ್ಟೆಯನ್ನು ಅನ್ವೇಷಿಸಲು ಪ್ರೇರೇಪಿಸಿದ್ದು ಹಲವು ಜಾಗತಿಕ ಕಾಫಿ ಸಂಸ್ಥೆಗಳು ಭಾರತದಲ್ಲಿ ವ್ಯವಹಾರಗಳನ್ನು ಆರಂಭಿಸಿವೆ. ಕಾಫಿ ವ್ಯಾಪಾರಕ್ಕಷ್ಟೇ ಅಲ್ಲ ಕಾಫಿ ಗ್ರಾಹಕರಿಗೂ ಅದ್ಭುತ ವಾತಾವರಣ ನಿರ್ಮಾಣವಾಗುತ್ತಿರುವ ಭಾರತದಲ್ಲಿ ಹೊಸದಾದ ಹಾಗೂ ಚಲನಶೀಲವಾದ ಕಾಫಿ ಸಮಾಜದತ್ತ ಇದು ಬೆಟ್ಟುಮಾಡಿ ತೋರಿಸುತ್ತದೆ.

ಸ್ವಾದಿಷ್ಟಕರ `ಗುರ್ಮೇ’ ಕಾಫಿಯ ಆಗಮನವು ಭಾರತದ ಕಾಫೀ ಮಾನಸಿಕತೆಯಲ್ಲಿ ಬಹಳಷ್ಟು ವ್ಯತ್ಯಾಸ ತಂದಿದೆ. ದಕ್ಷಿಣ ಭಾರತದ ಸಾಂಪ್ರದಾಯಿಕ ಫಿಲ್ಟರ್ ಕಾಫಿಯು ಇಂದು ಇಟಾಲಿಯನ್ ಎಸ್‌ಪ್ರೆಸೋ ಮತ್ತು ಇನ್‌ಸ್ಟೆಂಟ್ ಕಾಫಿಗಳ ನಡುವೆ ಅಸ್ತಿತ್ವ ಹೊಂದಿರುವ ರೀತಿಯು ನಿಜಕ್ಕೂ ಕುತೂಹಲಕರ. ಗ್ರಾಹಕರು ಎರಡು ಹಂತದ ಸ್ಟೈನ್‌ಲೆಸ್ ಸ್ಟೀಲಿನ ಫಿಲ್ಟರ್‌ನಲ್ಲಿ ಸಿದ್ಧಪಡಿಸಲಾದ ಕಾಫಿಯೊಂದಿಗೆ ಮುಂಜಾವಿನ ಆಹ್ಲಾದತೆಯನ್ನು ಸವಿಯಬಹುದು, ಆಫೀಸು ಕ್ಯಾಂಟೀನಿನಲ್ಲಿ ನೀಡಲಾಗುವ ಉಲ್ಲಾಸಭರಿತ ಕಾಫಿಯನ್ನು ಸೇವಿಸಬಹುದು, ಸಂಜೆಯ ಹೊತ್ತು ಕಾಫಿ ಬಾರ್‌ವೊಂದರಲ್ಲಿ ಸ್ನೇಹಿತರೊಂದಿಗೆ ಕೂಡಿ ಇಟಾಲಿಯನ್ ಶೈಲಿಯ ಕಾಪಚೀನೋದ ರುಚಿಯ ಸ್ವಾದವನ್ನು ಅನುಭವಿಸಬಹುದು. ವಿವಿಧ ರೀತಿಯ ಕಾಫಿಗಳನ್ನು ಬೆಳೆಸುವ ಮತ್ತು ಮಾರಾಟ ಮಾಡುವ ವಿಷಯದಲ್ಲಾಗಲೀ ಅಥವಾ ವಿವಿಧ ಕಾಫಿಗಳನ್ನು ಸೇವಿಸುವ ವಿಧಾನಗಳಲ್ಲಾಗಲೀ ಭಾರತೀಯ ಕಾಫಿ ಮಾರುಕಟ್ಟೆಯು ವೈವಿಧ್ಯಮಯವಾಗಿದೆ. ಏತನ್ಮಧ್ಯೆ, ರೋಸ್ಟ್ ಮಾಡಿದ ಮತ್ತು ಪುಡಿ ಮಾಡಿದ ಕಾಫಿಯ ಅಲಭ್ಯತೆ ಹಾಗೂ ಸೀಮಿತ ಪ್ರಮಾಣದಲ್ಲಿ ಇನ್‌ಸ್ಟೆಂಟ್ ಕಾಫಿಯ ಲಭ್ಯತೆಯಿಂದಾಗಿ ಬಹುಶಃ ಕಾಫಿಯು ದರ್ಲಭವೆಂದೋ ಅಥವಾ ಅದೊಂದು ಪರಕೀಯ ಎಂದೋ ಪರಿಗಣಿಸಿರುವ ಪ್ರದೇಶಗಳು ದೇಶದಲ್ಲಿ ಈಗಲೂ ಇವೆ. ಭಾರತವು ನಿಜಕ್ಕೂ ಸಂಕೀರ್ಣವಾದ ಕಾಫಿ ಮಾರುಕಟ್ಟೆಯಾಗಿರುವುದಾದರೂ ಅತ್ಯುತ್ತಮ ಪ್ರತಿಫಲ ನೀಡುವ ಶಕ್ತಿ ಹೊಂದಿದೆ.

ಪ್ರಗತಿಯ ಹಾದಿಯಲ್ಲಿರುವ ಭಾರತೀಯ ಆರ್ಥಿಕ ವ್ಯವಸ್ಥೆಯಿಂದ ರೂಪುತಳೆದ ಗ್ರಾಹಕ ಜೀವನಶೈಲಿ ಮತ್ತು ಖರೀದಿ ಪ್ರವೃತ್ತಿಯಲ್ಲಿ ಆಗುತ್ತಿರುವ ಬದಲಾವಣೆಗಳೊಂದಿಗೆ ಕಾಫಿ ಸೇವನೆಯ ಹವ್ಯಾಸ ಮತ್ತು ಪ್ರವೃತ್ತಿಗಳಲ್ಲೂ ಬದಲಾವಣೆ ಸಂಭವಿಸುತ್ತಿರುವುದು ಸುಸ್ಪಷ್ಟ. ಮಾರಾಟದ ವೇಗ ಕಾಯ್ದುಕೊಳ್ಳುವುದು, ಈಗಾಗಲೇ ಇರುವ ಮಾರುಕಟ್ಟೆಗಳಲ್ಲಿ ಮತ್ತಷ್ಟು ಆಳವಾಗಿ ಹರಡುವುದು ಹಾಗೂ ಹೊಸ ಮಾರುಕಟ್ಟೆಗಳನ್ನೇ ಅಭಿವೃದ್ಧಿಪಡಿಸುವುದು ಇವು ಮಾರಾಟ ಮತ್ತು ಪ್ರಚಾರ ವಿಭಾಗದವರ ಮುಂದಿರುವ ಸವಾಲುಗಳಾಗಿವೆ. ಗ್ರಾಹಕರಿಗೆ ಉತ್ಕೃಷ್ಟ ಗುಣಮಟ್ಟದ ಕಾಫಿಯು ಸಿಗಬೇಕಾಗಿದೆ, ಹಾಗೂ ಅವರಿಗೆ ಭಾರತೀಯ ಮತ್ತು ಅಂತಾರಾಷ್ಟ್ರೀಯ ಕಾಫಿಗಳ ಸಮೃದ್ಧ ಹಾಗೂ ಆಹ್ಲಾದಕರ ಜಗತ್ತನ್ನು ನಿರಂತರವಾಗಿ ಅನುಭವಿಸಲು ಮತ್ತು ಅನ್ವೇಷಿಸಲು ಅವಶ್ಯ ಉತ್ತೇಜನ ದೊರಕಬೇಕಾಗಿದೆ. ಪ್ರೇರೇಪಣೆ ಅಗತ್ಯವೂ ಹೌದು, ಹಾಗೂ ಇದು ಕಾಫಿ ಪಾನೀಯದೊಂದಿಗೇ ಆರಂಭವಾಗುತ್ತದೆ.

ಇಳಯರಾಜ|
ಖಡಕ್ಕಾಗಿ ತಯಾರಿಸಿದ ಒಂದು ಕಪ್‌ನ ಉತ್ಕೃಷ್ಟ ಕಾಫಿಯು ನಮ್ಮ ಜೀವನದ ಸಣ್ಣ ಪುಟ್ಟ ಸಂತೋಷಗಳಲ್ಲಿ ಒಂದು.


ಇದರಲ್ಲಿ ಇನ್ನಷ್ಟು ಓದಿ :