ಇಂದಿನಿಂದ ಬೆಂಗಳೂರಿನಲ್ಲಿ ಖಾಸಗಿ ಕಂಪನಿಗಳೂ ಬಂದ್

ಬೆಂಗಳೂರು| Krishnaveni K| Last Updated: ಸೋಮವಾರ, 23 ಮಾರ್ಚ್ 2020 (11:32 IST)
ಬೆಂಗಳೂರು: ಕೊರೋನಾವೈರಸ್ ಹರಡದಂತೆ ತಡೆಯಲು ರಾಜ್ಯದ ಒಂಭತ್ತು ಜಿಲ್ಲೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅದರಂತೆ ಬೆಂಗಳೂರು, ಮಂಗಳೂರು ಸೇರಿದಂತೆ 9 ಜಿಲ್ಲೆಗಳು ಸಂಪೂರ್ಣ ಸ್ತಬ್ಧವಾಗಿದೆ.

 
ಹಾಲು, ದಿನಸಿಯಂತಹ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಈ ಜಿಲ್ಲೆಗಳಲ್ಲಿ ಖಾಸಗಿ ಕಂಪನಿಗಳು, ಇತರ ಅಂಗಡಿ ಮುಂಗಟ್ಟುಗಳು, ಬಸ್, ಮೆಟ್ರೋ ಸಾರಿಗೆ ವ್ಯವಸ್ಥೆಗಳು ಸಂಪೂರ್ಣವಾಗಿ ಬಂದ್ ಆಗಿದೆ.
 
ಇಂದಿನಿಂದ ಸೆಕ್ಷನ್ 144 ಜಾರಿ ಮಾಡಲಾಗಿದೆ. ಹೀಗಾಗಿ ಸಭೆ, ಸಮಾರಂಭಗಳೂ ರದ್ದಾಗಿವೆ. ಕೊರೋನಾಗೆ ಈಗಾಗಲೇ ಕರ್ನಾಟಕದಲ್ಲಿ 26 ಪ್ರಕರಣಗಳು ಪತ್ತೆಯಾಗಿವೆ.
ಇದರಲ್ಲಿ ಇನ್ನಷ್ಟು ಓದಿ :