ದೇಶಕ್ಕೆ ಮಾದರಿಯಾಗಿದ್ದ ಕೇರಳದಲ್ಲೂ ದಿನೇ ದಿನೇ ಹೆಚ್ಚುತ್ತಿದೆ ಕೊರೋನಾ

ತಿರುವನಂತಪುರಂ| Krishnaveni K| Last Modified ಭಾನುವಾರ, 19 ಜುಲೈ 2020 (09:04 IST)
ತಿರುವನಂತಪುರಂ: ಕೊರೋನಾ ನಿಯಂತ್ರಣ ವಿಚಾರದಲ್ಲಿ ಇತರ ರಾಜ್ಯಗಳಿಗೆ ಮಾದರಿಯಾಗಿದ್ದ ಕೇರಳದಲ್ಲೂ ಈಗ ದಿನೇ ದಿನೇ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

 
ಮುಖ್ಯಮಂತ್ರಿ ಪಿಣರಾಯಿ ವಿಜಯ್ ತಿರುವನಂತಪುರಂನ ಕೆಲವು ಭಾಗಗಳಲ್ಲಿ ಸಮುದಾಯ ಮಟ್ಟಕ್ಕೆ ಕೊರೋನಾ ಹರಡಿದೆ ಎಂಬ ಆತಂಕಕಾರಿ ವಿಚಾರವನ್ನು ಹೊರಹಾಕಿದ್ದಾರೆ.
 
ಕಳೆದ ಮೂರು-ನಾಲ್ಕು ದಿನಗಳಿಂದ ಪ್ರತಿನಿತ್ಯ 600 ಕ್ಕೂ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಹೀಗಾಗಿ ಕೇರಳ ಈಗ ಮತ್ತೆ 11 ಸಾವಿರದ ಗಡಿ ದಾಟಿದೆ. ಹೀಗಾಗಿ ಕೆಲವೆಡೆ ಮತ್ತೆ ಲಾಕ್ ಡೌನ್ ಜಾರಿಗೊಳಿಸಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :