ರೈಲ್ವೇ ಪ್ರಯಾಣಕ್ಕೆ ಮೊದಲು ಇನ್ನು ಕಡ್ಡಾಯವಾಗಿ ಈ ಕೆಲಸ ಮಾಡಬೇಕು

ನವದೆಹಲಿ| Krishnaveni K| Last Modified ಶುಕ್ರವಾರ, 15 ಮೇ 2020 (09:24 IST)
ನವದೆಹಲಿ: ದೇಶದಲ್ಲಿ ಕೊರೋನಾ ದಿನೇ ದಿನೇ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರೈಲ್ವೇ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ.
 

ಈಗಾಗಲೇ ಬಹುತೇಕ ರೈಲು ಯಾನ ಆರಂಭವಾಗಿದ್ದು, ಇದರ ಜತೆಗೆ ಸೋಂಕು ಹರಡುವ ಭೀತಿಯೂ ಇದೆ. ಸೋಂಕಿತರ ಸುಲಭ ಪತ್ತೆಗಾಗಿ ಸರ್ಕಾರ ಕಡ್ಡಾಯವಾಗಿ ಪ್ರಯಾಣಕ್ಕೆ ಮೊದಲು ವಿಳಾಸ ನೀಡಬೇಕೆಂದು ತಿಳಿಸಿದೆ.
 
ಇದರಿಂದಾಗಿ ಒಂದು ವೇಳೆ ರೈಲು ಯಾತ್ರಿಕರಲ್ಲಿ ಯಾರಿಗಾದರೂ ಸೋಂಕು ಇದ್ದರೂ ಅವರನ್ನು ಪತ್ತೆ ಮಾಡುವುದು ಸುಲಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :