ಕೊರೋನಾ ವ್ಯಾಕ್ಸಿನ್ ಉತ್ಪಾದನೆ ಶುರುಮಾಡಿಕೊಂಡ ರಷ್ಯಾ

ನವದೆಹಲಿ| Krishnaveni K| Last Updated: ಭಾನುವಾರ, 16 ಆಗಸ್ಟ್ 2020 (11:22 IST)
ನವದೆಹಲಿ: ಕೊರೋನಾ ವ್ಯಾಕ್ಸಿನ್ ನ್ನು ಮೊದಲ ಬಾರಿಗೆ ಕಂಡು ಹಿಡಿದಿದ್ದು ತಾವೇ ಎಂದು ಬೀಗುತ್ತಿರುವ ರಷ್ಯಾ ಈಗ ಇದರ ಸುರಕ್ಷತೆ ಬಗ್ಗೆ ಸರಿಯಾದ ಅಧ‍್ಯಯನ ವರದಿ ಸಿಗುವ ಮೊದಲೇ ಉತ್ಪನ್ನ ತಯಾರಿಸಲು ಹೊರಟಿದೆ.

ರಷ್ಯಾ ಈಗ ಕೊರೋನಾ ವ್ಯಾಕ್ಸಿನ್ ತಯಾರಿಕೆಯಲ್ಲಿ ತೊಡಗಿದ್ದು, ವಿಶ್ವದ ಬೇರೆ ರಾಷ್ಟ್ರಗಳಿಗೂ ವಿತರಿಸಲು ಸಿದ್ಧವಾಗಿದೆ. ಆ ಮೂಲಕ ಕೊರೋನಾ ವ್ಯಾಕ್ಸಿನ್ ಕಂಡುಕೊಳ್ಳುವಲ್ಲಿ ತಾನು ಯಶಸ್ವಿಯಾದೆ ಎಂದು ಜಗತ್ತಿನ ಮುಂದೆ ತೋರಿಸಿಕೊಳ್ಳಲು ಹೊರಟಿದೆ.
 
ಆದರೆ ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳ ತಜ್ಞರು ರಷ್ಯಾ ಕಂಡುಹಿಡಿದಿದೆ ಎನ್ನಲಾಗಿರುವ ವ್ಯಾಕ್ಸಿನ್ ಸಂಪೂರ್ಣ ಸುರಕ್ಷಿತವೇ ಎಂದು ಇನ್ನೂ ಖಚಿತಪಡಿಸಿಲ್ಲ.
ಇದರಲ್ಲಿ ಇನ್ನಷ್ಟು ಓದಿ :