ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಮೂವರಿಗೆ ಗಾಯ

ಲಂಡನ್| Krishnaveni K| Last Modified ಮಂಗಳವಾರ, 27 ಜುಲೈ 2021 (09:20 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಮೂವರು ಕ್ರಿಕೆಟಿಗರು ಗಾಯಗೊಂಡಿದ್ದು, ಇದೀಗ ಟೀಂ ಇಂಡಿಯಾಕ್ಕೆ ಮೂವರು ಬದಲಿ ಆಟಗಾರರು ಸೇರ್ಪಡೆಯಾಗಿದ್ದಾರೆ.

 
ಆಲ್ ರೌಂಡರ್ ವಾಷಿಂಗ್ಟನ್ ಸುಂದರ್, ವೇಗಿ ಆವೇಶ್ ಖಾನ್ ಮತ್ತು ಶುಬ್ನಂ ಗಿಲ್ ಗಾಯಗೊಂಡವರು. ಈ ಪೈಕಿ ಗಿಲ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಮುಗಿದ ಬೆನ್ನಲ್ಲೇ ಇಂಗ್ಲೆಂಡ್ ಸರಣಿಯಿಂದ ಹೊರಬಿದ್ದ ಸುದ್ದಿ ಬಂದಿತ್ತು.
 
ವೇಗಿ ಆವೇಶ‍್ ಖಾನ್ ಅಭ್ಯಾಸದ ಪದ್ಯದ ವೇಳೆ ಎಡ ಹೆಬ್ಬರಳಿನ ಗಾಯಕ್ಕೊಳಗಾಗಿದ್ದಾರೆ. ವಾಷಿಂಗ್ಟನ್ ಸುಂದರ್ ಕೂಡಾ ಅಭ್ಯಾಸದ ವೇಳೆಯೇ ಗಾಯಗೊಂಡಿದ್ದರು. ಹೀಗಾಗಿ ಇವರ ಬದಲಿಗೆ ಇಂಗ್ಲೆಂಡ್ ಪ್ರವಾಸದಲ್ಲಿ ಇಂಪ್ರೆಸ್ ಮಾಡಿರುವ ಸೂರ್ಯಕುಮಾರ್ ಯಾದವ್, ಪೃಥ್ವಿ ಶಾರನ್ನು ಕರೆಸಿಕೊಳ್ಳಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :