Widgets Magazine

ಮದುವೆ ಆನಿವರ್ಸರಿಗೆ ವಿರಾಟ್-ಅನುಷ್ಕಾ ಭಾವನೆಗಳ ವಿನಿಮಯ

ಮುಂಬೈ| Krishnaveni K| Last Modified ಬುಧವಾರ, 11 ಡಿಸೆಂಬರ್ 2019 (10:16 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇಂದು ವೃತ್ತಿ ಜೀವನದಲ್ಲಿ ಫೈನಲ್ ಪಂದ್ಯದ ಅಗ್ನಿಪರೀಕ್ಷೆಯಾದರೆ ವೈಯಕ್ತಿಕ ಜೀವನದಲ್ಲಿ ಸಿಹಿಯಾದ ದಿನ.

 
ಪತ್ನಿ ಅನುಷ್ಕಾ ಶರ್ಮಾರೊಂದಿಗೆ ಕೊಹ್ಲಿ ಇಂದು ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ಇದು ಮುಂಬೈನಲ್ಲೇ ನಡೆಯುತ್ತಿರುವುದರಿಂದ ಪಂದ್ಯ ಗೆದ್ದು ಅನುಷ್ಕಾಗೆ ವಿರಾಟ್ ಉಡುಗೊರೆ ಕೊಟ್ಟರೂ ಅಚ್ಚರಿಯಿಲ್ಲ.
 
ಇದರ ನಡುವೆ ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಭಾವನಾತ್ಮಕವಾಗಿ ಸಂದೇಶ ಬರೆದುಕೊಂಡಿದ್ದು, ರೊಮ್ಯಾಂಟಿಕ್ ಮೂಡ್ ನಲ್ಲಿರುವ ಫೋಟೋ ಕೂಡಾ ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲದೆ, ಇಬ್ಬರಿಗೂ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಕಾಮೆಂಟ್ ಮಾಡುವ ಮೂಲಕ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಹಾರೈಸುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :