14 ವರ್ಷ ಆಯ್ತು ಕ್ರಿಕೆಟ್ ಗೆ ಬಂದು, ಇನ್ನೂ ಹೀಗೆಲ್ಲಾ ಹೇಳಕ್ಕಾಗುತ್ತಾ? ಧೋನಿ ಪ್ರಶ್ನೆ

ಮೆಲ್ಬೋರ್ನ್| Krishnaveni K| Last Modified ಶನಿವಾರ, 19 ಜನವರಿ 2019 (09:53 IST)
ಮೆಲ್ಬೋರ್ನ್: ಧೋನಿಗೆ ಈ ಬಾರಿಯ ಆಸ್ಟ್ರೇಲಿಯಾ ಏಕದಿನ ಸರಣಿ ಮಹತ್ವದ್ದಾಗಿತ್ತು. ಅವರ ಫಾರ್ಮ್ ಬಗ್ಗೆ ಟೀಕೆಗಳು ಬರುತ್ತಿದ್ದಾಗಲೇ ಈ ಸರಣಿಯಲ್ಲಿ ಸಿಡಿದೆದ್ದ ಧೋನಿ ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.
  ಹೀಗಾಗಿ ಅರ್ಹವಾಗಿಯೇ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ ತಮ್ಮ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.>  > ’ನಾನು ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತೇನೆ ಎನ್ನುವುದು ಮುಖ್ಯವಲ್ಲ. ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲೂ ನಾನು ಸಿದ್ಧ. 14 ವರ್ಷದಿಂದ ತಂಡದಲ್ಲಿದ್ದೇನೆ. ಈಗಲೂ ನಾನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲ್ಲ, ನಾಲ್ಕನೇ ಕ್ರಮಾಂಕವೇ ಬೇಕು ಎಂದು ಹೇಳಕ್ಕಾಗಲ್ಲ’ ಎಂದು ಧೋನಿ ಮಾರ್ಮಿಕವಾಗಿ ಹೇಳಿದ್ದಾರೆ.  
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :