ಟೆಸ್ಟ್ ನಿಂದ ಕೆಎಲ್ ರಾಹುಲ್ ಕಿತ್ತೊಗೆಯಲು ಮತ್ತೊಬ್ಬ ಮಾಜಿ ಕ್ರಿಕೆಟಿಗನ ಒತ್ತಾಯ

ಮುಂಬೈ| Krishnaveni K| Last Modified ಭಾನುವಾರ, 8 ಸೆಪ್ಟಂಬರ್ 2019 (07:19 IST)
ಮುಂಬೈ: ನಿರೀಕ್ಷಿತ ಪ್ರದರ್ಶನ ನೀಡದ ಕಾರಣಕ್ಕ ಕನ್ನಡಿಗ ಕೆಎಲ್ ರಾಹುಲ್ ರನ್ನು ಟೆಸ್ಟ್ ತಂಡದಿಂದ ಕೈ ಬಿಡಲು ಮತ್ತೊಬ್ಬ ಮಾಜಿ ಆಟಗಾರ ಒತ್ತಾಯಿಸಿದ್ದಾರೆ.

 
ಈ ಮೊದಲು ಸೌರವ್ ಗಂಗೂಲಿ ರಾಹುಲ್  ಬದಲಿಗೆ ರೋಹಿತ್ ಶರ್ಮಾಗೆ ಆರಂಭಿಕ ಸ್ಥಾನ ನೀಡಬೇಕು. ರಾಹುಲ್ ತಮಗೆ ನೀಡಿದ  ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದಿದ್ದರು.
 
ಈಗ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಂಗೂಲಿ ಹೇಳಿದ್ದಕ್ಕೆ ನನ್ನದೂ ಸಹಮತವಿದೆ. ಭಾರತದ ಪರವಾಗಿ ಸೆಹ್ವಾಗ್ ಆರಂಭಿಕರಾಗಿದ್ದರು. ಹಾಗೆಯೇ ದೀಪ್ ದಾಸ್ ಗುಪ್ತಾ ಕೂಡಾ ಆರಂಭಿಕರಾಗಿದ್ದರು. ಆದರೆ ರೋಹಿತ್ ಶರ್ಮಾ ದೀಪ್ ದಾಸ್ ಗಿಂತಲೂ ಉತ್ತಮ ಆಟಗಾರ. ಹೀಗಾಗಿ ರೋಹಿತ್ ಗೆ ತವರಿನಲ್ಲಿ ಆರು ಪಂದ್ಯ ನೀಡಿದರೆ ಆತ ವಿದೇಶದಲ್ಲೂ ಉತ್ತಮವಾಗಿ ಆಡಬಲ್ಲ’ ಎಂದು ಗಂಭೀರ್  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :