ವಿರಾಟ್ ಕೊಹ್ಲಿ ಟ್ರೋಲ್ ಗಳಿಗೆ ಕೊನೆಗೂ ತಕ್ಕ ಪ್ರತ್ಯುತ್ತರ ಕೊಟ್ಟ ಐಸಿಸಿ

ದುಬೈ| Krishnaveni K| Last Modified ಶುಕ್ರವಾರ, 7 ಜೂನ್ 2019 (09:37 IST)
ದುಬೈ: ರ ಮೊದಲ ಪಂದ್ಯವಾಡುವ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೋಟೋವನ್ನು ಪ್ರಕಟಿಸಿ ‘ಕಿಂಗ್ ಕೊಹ್ಲಿ’ ಎಂದಿದ್ದಕ್ಕೆ ಐಸಿಸಿ ಸಾಕಷ್ಟು ಟ್ರೋಲ್ ಗೊಳಗಾಗಿತ್ತು.

 
ಇದರ ನಡುವೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅಂತೂ ಐಸಿಸಿ ಒಂದು ತಂಡದ ನಾಯಕನ ಫೋಟೋ ಮಾತ್ರ ಪ್ರಕಟಿಸಿ ಬೇಧ ಮಾಡುತ್ತಿದೆ ಎಂದು ಆರೋಪಿಸಿದ್ದರು. ಆದರೆ ಈ ಕಾಮೆಂಟ್ ವಿರಾಟ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು.
 
ಇದೀಗ ಸ್ವತಃ ಐಸಿಸಿ ಮೈಕಲ್ ವಾನ್ ಆಕ್ಷೇಪಕ್ಕೆ ತಿರುಗೇಟು ನೀಡಿದೆ. ಕೊಹ್ಲಿಯ ಏಕದಿನ ಮತ್ತು ಟೆಸ್ಟ್ ರ್ಯಾಂಕಿಂಗ್ ಜತೆಗೆ ಅವರು ಐಸಿಸಿಯ ಮೂರೂ ಪ್ರಶಸ್ತಿಯನ್ನು ಬಾಚಿಕೊಂಡಿರುವ ವಿವರವನ್ನು ಒಳಗೊಂಡ ಫೋಟೋವೊಂದನ್ನು ಐಸಿಸಿ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿ ಇದಕ್ಕೂ ಮೊದಲು ಕೊಹ್ಲಿಯನ್ನು ಕಿಂಗ್ ಎಂದಿದ್ದನ್ನು ಸಮರ್ಥಿಸಿಕೊಂಡಿದೆ. ಐಸಿಸಿಯ ಪ್ರತ್ಯುತ್ತರ ನೋಡಿ ಇದೀಗ ಕೊಹ್ಲಿ ಅಭಿಮಾನಿಗಳು ವಾನ್ ರನ್ನು ಲೇವಡಿ ಮಾಡುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :