ಐಸಿಸಿ ಟೆಸ್ಟ್ ರ್ಯಾಂಕಿಂಗ್​: ಕೆಎಲ್ ರಾಹುಲ್, ಸಿರಾಜ್ ಭಾರೀ ಜಿಗಿತ

bengaluru| Geetha| Last Updated: ಬುಧವಾರ, 18 ಆಗಸ್ಟ್ 2021 (19:47 IST)
ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ನಡೆದ ಟೆಸ್ಟ್ ಪಂದ್ಯದ ರೋಚಕ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ ಕೆಎಲ್ ರಾಹುಲ್ ಮತ್ತು ಮಧ್ಯಮ ವೇಗಿ ಮೊಹಮದ್ ಸಿರಾಜ್ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಭಾರೀ ಜಿಗಿತ ಕಂಡಿದ್ದಾರೆ. ಐಸಿಸಿ ಬುಧವಾರ ಬಿಡುಗಡೆ ಮಾಡಿದ ನೂತನ ಟೆಸ್ಟ್ ರ್ಯಾಕಿಂಗ್ ಪಟ್ಟಿಯಲ್ಲಿ ಸಿರಾಜ್ ಜೀವನಶ್ರೇಷ್ಠ 38ನೇ ಸ್ಥಾನದಿಂದ 19 ಸ್ಥಾನ ಬಡ್ತಿ ಪಡೆದು 18ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಸಿರಾಜ್ ಲಾರ್ಡ್ಸ್ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ಸಿರಾಜ್ ತಲಾ 4 ವಿಕೆಟ್ ಪಡೆದಿದ್ದರು.
ಭಾರತದ ಮತ್ತೊಬ್ಬ ವೇಗಿ ಜಸ್ ಪ್ರೀತ್ ಬುಮ್ರಾ 10ನೇ ಸ್ಥಾನ ಪಡೆದಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ 19ರಿಂದ 9ನೇ ಸ್ಥಾಕ್ಕೆ ಜಿಗಿದಿದ್ದ ಬುಮ್ರಾ ಎರಡನೇ ಟೆಸ್ಟ್ ಪಂದ್ಯದ ನಂತರ ಒಂದು ಸ್ಥಾನ ಕುಸಿದರೂ ಅಗ್ರ 10ರೊಳಗೆ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕದ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್ ಗೆ ಮರಳಿದ ಬೆನ್ನಲ್ಲೇ ಶತಕ ಸಿಡಿಸುವ ಮೂಲಕ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಭಾರೀ ಜಿಗಿತ ಕಂಡಿದ್ದಾರೆ. 19 ಸ್ಥಾನ ಬಡ್ತಿ ಪಡೆದು 39ನೇ ಸ್ಥಾನ ಗಳಿಸಿದ್ದರೆ, ನಾಯಕ ವಿರಾಟ್ ಕೊಹ್ಲಿ 5ನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ರೋಹಿತ್ ಶರ್ಮ 6ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :