ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಇಂದಿನಿಂದ ಶುರು

ಲಂಡನ್| Krishnaveni K| Last Modified ಬುಧವಾರ, 4 ಆಗಸ್ಟ್ 2021 (09:20 IST)
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಮೊದಲ ಟೆಸ್ಟ್ ಪಂದ್ಯ ಟ್ರೆಂಟ್ ಬ್ರಿಜ್ ನಲ್ಲಿ ನಡೆಯಲಿದೆ.

 
ಟೆಸ್ಟ್ ಚಾಂಪಿಯನ್ ಶಿಪ್ ಸರಣಿಯ ಮೊದಲ ಸರಣಿ ಇದಾಗಿದೆ. ಅಲ್ಲದೆ, ಕಳೆದ ಬಾರಿ ಇಂಗ್ಲೆಂಡ್ ಪ್ರವಾಸದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳಲು ಇದು ಸುಸಂದರ್ಭ. ಹೀಗಾಗಿ ಈ ಟೆಸ್ಟ್ ಸರಣಿ ಭಾರತಕ್ಕೆ ಮಹತ್ವದ್ದಾಗಿದೆ.
 
ಭಾರತಕ್ಕೆ ಸರಣಿ ಆರಂಭಕ್ಕೂ ಮುನ್ನವೇ ಮಯಾಂಕ್ ಅಗರ್ವಾಲ್ ಗಾಯದ ರೂಪದಲ್ಲಿ ಆಘಾತ ಸಿಕ್ಕಿದೆ. ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್ ಗಳನ್ನು ಆಯ್ಕೆ ಮಾಡುವುದೇ ಕೊಹ್ಲಿಗೆ ತಲೆನೋವಾಗಲಿದೆ. ಸಾಕಷ್ಟು ಆಯ್ಕೆಗಳಿದ್ದು, ಅಂತಿಮವಾಗಿ ತಂಡಕ್ಕೆ ಯಾರು ಆಯ್ಕೆಯಾಗುತ್ತಾರೆ ಎಂದು ಕಾದು ನೋಡಬೇಕಿದೆ. ಭಾರತೀಯ ಕಾಲಮಾನ ಪ್ರಕಾರ ಈ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :