ಭಾರತ-ಲಂಕಾ ಟಿ20: ಇಂದಿನ ಒಂದೇ ಪಂದ್ಯಕ್ಕೆ ಸರಣಿ ಮುಕ್ತಾಯ

ಇಂದೋರ್| Krishnaveni K| Last Modified ಮಂಗಳವಾರ, 7 ಜನವರಿ 2020 (09:21 IST)
ಇಂದೋರ್: ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯ ಮಳೆಗೆ ಆಹುತಿಯಾಯಿತು. ಇದರೊಂದಿಗೆ ಈ ವರ್ಷದ ಮೊದಲ ಪಂದ್ಯಕ್ಕೇ ವಿಘ್ನ ಎದುರಾಯಿತು.

 
ಇದೀಗ ಇನ್ನೊಂದು ಪಂದ್ಯ ಉಳಿದುಕೊಂಡಿದ್ದು ಇದು ಇಂದು ಇಂದೋರ್ ನಲ್ಲಿ ನಡೆಯಲಿದೆ. ಈ ಒಂದು ಪಂದ್ಯ ಗೆದ್ದವರು ಸಸರಣಿ ಗೆಲುವಿನ ನಗೆ ಬೀರಲಿದ್ದಾರೆ. ಟೀಂ ಇಂಡಿಯಾಗೆ ಲಂಕಾ ಸುಲಭ ತುತ್ತಾಗಲಿದೆ.
 
ಅಂಕಿ ಅಂಶಗಳನ್ನು ನೋಡಿದರೆ ಈ ಮೈದಾನದಲ್ಲಿ ಟಿ20 ಪಂದ್ಯದಲ್ಲಿ ಗರಿಷ್ಠ 260 ರನ್ ವರೆಗೂ ಸ್ಕೋರ್ ಮಾಡಲಾಗಿದೆ. ಅದೂ ಲಂಕಾ ವಿರುದ್ಧವೇ ದಾಖಲಾಗಿರುವುದು ವಿಶೇಷ. ಹೀಗಾಗಿ ಇದು ಪಕ್ಕಾ ಬ್ಯಾಟಿಂಗ್ ಪಿಚ್. ಒಂದು ರೀತಿಯಲ್ಲಿ ಭಾರತದ ಪಾಲಿಗೆ ಇದು ಲಕ್ಕಿ ಮೈದಾನ. ಇಲ್ಲಿ ಟೀಂ ಇಂಡಿಯಾ ವಿಜೃಂಭಿಸುವುದನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ. ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :