ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿ ಇಂದಿನಿಂದ

ಫ್ಲೋರಿಡಾ| Krishnaveni K| Last Modified ಗುರುವಾರ, 8 ಆಗಸ್ಟ್ 2019 (09:02 IST)
ಫ್ಲೋರಿಡಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಏಕದಿನ ಸರಣಿ ಆರಂಭವಾಗಲಿದೆ. ಇಂದು ಮೊದಲ ಪಂದ್ಯ ನಡೆಯಲಿದೆ.

 
ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿರುವ ಕೊಹ್ಲಿ ಪಡೆ ಈಗ ಏಕದಿನ ಸರಣಿಯಲ್ಲೂ ಅದೇ ಸಾಧನೆ ಮಾಡಲು ಸಿದ್ಧವಾಗಿದೆ. ವಿಶ್ವಕಪ್ ಬಳಿಕ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಏಕದಿನ ಪಂದ್ಯವಾಡುತ್ತಿದೆ.
 
ಗಾಯಾಳುವಾಗಿದ್ದ ಶಿಖರ್ ಧವನ್ ತಂಡಕ್ಕೆ ಮರಳಿರುವುದರಿಂದ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆಯಿದೆ. ಧವನ್ ಗೆ ಮತ್ತೆ ಲಯ ಕಂಡುಕೊಳ್ಳಲು ಇದು ಉತ್ತಮ ವೇದಿಕೆಯಾಗಲಿದೆ. ಉಳಿದಂತೆ ಎದುರಾಳಿಗಳಿಗೆ ಹೋಲಿಸಿದರೆ ಟೀಂ ಇಂಡಿಯಾ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :