Widgets Magazine

ಪಾಕ್ ಕ್ರಿಕೆಟಿಗ ಹಫೀಜ್ ಕೊರೋನಾ ಪರೀಕ್ಷೆ ಬಗ್ಗೆ ಗೊಂದಲವೋ ಗೊಂದಲ

ಇಸ್ಲಾಮಾಬಾದ್| Krishnaveni K| Last Modified ಭಾನುವಾರ, 28 ಜೂನ್ 2020 (09:24 IST)
ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಆಗಾಗ ಎಡವಟ್ಟಿನ ಕಾರಣಕ್ಕೆ ಸುದ್ದಿಯಾಗುವುದು ಮಾಮೂಲು. ಈಗ ಕ್ರಿಕೆಟಿಗರ ಕೊರೋನಾ ಪರೀಕ್ಷೆ ವಿಚಾರದಲ್ಲೂ ಹಾಗೆಯೇ ಆಗಿದೆ.

 

ಇಂಗ್ಲೆಂಡ್ ಗೆ ತೆರಳಬೇಕಿದ್ದ ಪಾಕ್ ಕ್ರಿಕೆಟಿಗರನ್ನು ಕೊರೋನಾ ಪರೀಕ್ಷೆಗೊಳಪಡಿಸಿದಾಗ 10 ಮಂದಿಗೆ ಕೊರೋನಾ ತಗುಲಿರುವುದು ಪತ್ತೆಯಾಗಿತ್ತು. ಆದರೆ ಇದಾದ ಮರು ದಿನವೇ ಈ ಪೈಕಿ ಮೊಹಮ್ಮದ್ ಹಫೀಜ್ ತನ್ನ ಪರೀಕ್ಷೆ ನೆಗೆಟಿವ್ ಬಂದಿದೆ ಎಂದಿದ್ದರು.
 
ಇದೀಗ ಮತ್ತೆ ಇಲ್ಲ..ಇಲ್ಲ.. ಹಫೀಜ್ ಗೆ ಕೊರೋನಾ ಇದೆ ಎನ್ನುತ್ತಿದೆ ಪಾಕ್ ಮಂಡಳಿ. ಈ ರೀತಿಯ ಕನ್ ಫ್ಯೂಷನ್ ನೋಡಿ ಕಾಮೆಂಟ್ ಮಾಡಿರುವ ಭಾರತೀಯ ಕಾಮೆಂಟೇಟರ್ ಆಕಾಶ್ ಚೋಪ್ರಾ ಗೊಂದಲ ಎನ್ನುವುದಕ್ಕೆ ಪಾಕ್ ಕ್ರಿಕೆಟ್ ಇನ್ನೊಂದು ಹೆಸರು. ಇದು ಅದರ ಪರಮಾವಧಿ. 72 ಗಂಟೆ ಅವಧಿಯಲ್ಲಿ ಒಮ್ಮೆ ಪೊಸಿಟಿವ್ ಅಂತಾರೆ ಇನ್ನೊಮ್ಮೆ ನೆಗೆಟಿವ್ ಅಂತಾರೆ, ಮತ್ತೆ ಪೊಸಿಟಿವ್ ಅಂತಾರೆ’ ಎಂದು ಅವರು ಟೀಕಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :