ಭಾರತ-ಆಸೀಸ್ ಟೆಸ್ಟ್: ಮಳೆಗೆ ಆಹುತಿಯಾಯ್ತು ಎರಡನೇ ದಿನದಾಟ

ಬ್ರಿಸ್ಬೇನ್| Krishnaveni K| Last Modified ಶನಿವಾರ, 16 ಜನವರಿ 2021 (16:29 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮಳೆಗೆ ಆಹುತಿಯಾಗಿದೆ.

 
ಇಂದಿನ ದಿನದಾಟದಲ್ಲಿ ಭಾರತ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿತ್ತು. ಆಗ ಮಳೆ ಸುರಿಯಲು ಆರಂಭವಾಯ್ತು. ಕೊನೆಗೆ ಮಳೆ ಬಿಡುವು ನೀಡದೇ ಇದ್ದಿದ್ದರಿಂದ ಇಂದಿನ ದಿನದಾಟವನ್ನು ರದ್ದುಗೊಳಿಸಲಾಯಿತು. ಭಾರತ ಮೊದಲ ಇನಿಂಗ್ಸ್ ನಲ್ಲಿ ಇನ್ನೂ 307 ರನ್ ಗಳ ಹಿನ್ನಡೆಯಲ್ಲಿದೆ.
ಇದರಲ್ಲಿ ಇನ್ನಷ್ಟು ಓದಿ :