Widgets Magazine

ನಾಳೆಯಿಂದ ಭಾರತ-ದ.ಆಫ್ರಿಕಾ ಟಿ20: ಕೊಹ್ಲಿ-ರೋಹಿತ್ ಶರ್ಮಾ ಪೈಪೋಟಿ ಈಗ ಮೈದಾನದಲ್ಲಿ!

ಧರ್ಮಶಾಲಾ| Krishnaveni K| Last Modified ಶನಿವಾರ, 14 ಸೆಪ್ಟಂಬರ್ 2019 (12:48 IST)
ಧರ್ಮಶಾಲಾ: ಭಾರತ ಮತ್ತು ದ.ಆಫ್ರಿಕಾ ನಡುವೆ ನಾಳೆಯಿಂದ ಟಿ20 ಸರಣಿ ಆರಂಭವಾಗಲಿದ್ದು, ಧರ್ಮಶಾಲಾದಲ್ಲಿ ಮೊದಲ ಪಂದ್ಯ ನಡೆಯಲಿದೆ.

 
 ಈ ಪಂದ್ಯದಲ್ಲಿ ದಾಖಲೆಯೊಂದನ್ನು ಮಾಡಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪೈಪೋಟಿ ನಡೆಸಲಿದ್ದಾರೆ. ಟಿ20 ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಈಗ ರೋಹಿತ್ ಶರ್ಮಾ ಹೆಸರಿನಲ್ಲಿದ್ದು, ಕೊಹ್ಲಿ ಅದಕ್ಕಿಂತ ಕೇವಲ 53 ರನ್ ಹಿನ್ನಡೆಯಲ್ಲಿದ್ದಾರೆ. ಹೀಗಾಗಿ ಈ ದಾಖಲೆಯನ್ನು ತಮ್ಮಲ್ಲಿ ಉಳಿಸಿಕೊಳ್ಳಲು ಇಬ್ಬರ ನಡುವೆ ಪೈಪೋಟಿ ನಡೆಯಲಿದೆ.
 
ಇದಲ್ಲದೆ ಇನ್ನೊಂದು ದಾಖಲೆಗಾಗಿಯೂ ಇಬ್ಬರ ನಡುವೆ ಪೈಪೋಟಿ ನಡೆಯಲಿದೆ. ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಟಿ20 ಪಂದ್ಯಗಳಲ್ಲಿ 50 ಪ್ಲಸ್ ರನ್ ಗಳಿಸಿದ ಪಟ್ಟಿಯಲ್ಲಿ ಜಂಟಿಯಾಗಿ ಸ್ಥಾನ ಹಂಚಿಕೊಂಡಿದ್ದಾರೆ. ರೋಹಿತ್ 17 ಅರ್ಧಶತಕ 4 ಶತಕ ಗಳಿಸಿ 21 ಬಾರಿ 50 ಪ್ಲಸ್ ರನ್ ಗಳಿಸಿದ್ದರೆ, ಕೊಹ್ಲಿ 21 ಅರ್ಧಶತಕ ಗಳಿಸಿದ್ದಾರೆ. ಈ ದಾಖಲೆಗಾಗಿಯೂ ಇಬ್ಬರ ನಡುವೆ ಕದನ ನಡಯಲಿದ್ದು, ಯಾರ ಕೈ ಮೇಲಾಗಲಿದೆ ಎಂದು ನೋಡಬೇಕಿದೆ.
ಇದರಲ್ಲಿ ಇನ್ನಷ್ಟು ಓದಿ :