ರವಿಶಾಸ್ತ್ರಿ ಇಲ್ಲದೇ ಕೊಹ್ಲಿ, ರೋಹಿತ್ ಜತೆಗೆ ಚರ್ಚೆ ಮಾಡಿದ ಅಧ್ಯಕ್ಷ ಗಂಗೂಲಿ

ಮುಂಬೈ| Krishnaveni K| Last Updated: ಶುಕ್ರವಾರ, 25 ಅಕ್ಟೋಬರ್ 2019 (09:50 IST)
ಮುಂಬೈ: ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಸೌರವ್ ಗಂಗೂಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಹಂಗಾಮಿ ನಾಯಕ ರೋಹಿತ್ ಶರ್ಮಾ ಜತೆಗೆ ತಂಡದ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ.

 
ನಿನ್ನೆ ಮುಂಬೈನಲ್ಲಿ ಆಯ್ಕೆ ಸಮಿತಿ ಸಭೆಗೆ ಹಾಜರಾದ ಬಳಿಕ ಟೀಂ ಇಂಡಿಯಾದ ಈ ಇಬ್ಬರು ಕ್ರಿಕೆಟಿಗರು ಗಂಗೂಲಿ ಜತೆ ತಂಡದ ರೂಪು ರೇಷೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಕೋಚ್ ರವಿಶಾಸ್ತ್ರಿ ಹಾಜರಿರಲಿಲ್ಲ. ಕೋಚ್ ಇಲ್ಲದೇ ಗಂಗೂಲಿ ಇಬ್ಬರು ಪ್ರಮುಖ ಕ್ರಿಕೆಟಿಗರ ಜತೆ ಚರ್ಚೆ ನಡೆಸಿದ್ದಾರೆ.
 
ರವಿಶಾಸ್ತ್ರಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ವೇಳೆ ಗಂಗೂಲಿ ಭೇಟಿಯಾಗುವ ನಿರೀಕ್ಷೆಯಿದೆ. ಅಧ್ಯಕ್ಷರಾದ ತಕ್ಷಣವೇ ಗಂಗೂಲಿ ವಿರಾಟ್ ಕೊಹ್ಲಿಗೆ ಬೇಕಾದ ಎಲ್ಲಾ ಸಹಕಾರ ಕೊಡುವುದಾಗಿ ಹೇಳಿದ್ದರು.
ಇದರಲ್ಲಿ ಇನ್ನಷ್ಟು ಓದಿ :