ಆಡಳಿತಾಧಿಕಾರಿಗಳ ಹೆಸರು ಸೂಚಿಸಲು ಬಿಸಿಸಿಐ, ಕೇಂದ್ರ ಸರ್ಕಾರಕ್ಕೇ ಕೇಳಿದ ಸುಪ್ರೀಂ ಕೋರ್ಟ್

NewDelhi| Krishnaveni K| Last Modified ಮಂಗಳವಾರ, 24 ಜನವರಿ 2017 (17:55 IST)
ನವದೆಹಲಿ: ಬಿಸಿಸಿಐಗೆ ಆಡಳಿತಾಧಿಕಾರಿಗಳ ನೇಮಿಸುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆಡಳಿತಾಧಿಕಾರಿಗಳ ಹೆಸರು ಸೂಚಿಸಲು ಮತ್ತು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಲು ಆದೇಶಿಸಿದೆ.

ಜನವರಿ 27 ರೊಳಗಾಗಿ ಮುಚ್ಚಿದ ಲಕೋಟೆಯಲ್ಲಿ ಲೋಧಾ ಸಮಿತಿಯ ಶಿಫಾರಸ್ಸಿನ ಅನ್ವಯ ಸೂಕ್ತ ವ್ಯಕ್ತಿಗಳ ಹೆಸರು ಸೂಚಿಸಲು ನ್ಯಾಯಾಲಯ ತಿಳಿಸಿದೆ. ಮುಂದಿನ ವಿಚಾರಣೆ ಜನವರಿ 30 ಕ್ಕೆ ಮುಂದೂಡಲಾಗಿದ್ದು, ಅಂದೇ ಹೊಸ ಆಡಳಿತಾಧಿಕಾರಿಗಳನ್ನು ಘೋಷಿಸುವ ಸಾಧ್ಯತೆಯಿದೆ.ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ. ಫೆಬ್ರವರಿ ಮೊದಲ ವಾರ ಐಸಿಸಿ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಬೇಕಾದ ಸದಸ್ಯರ ಹೆಸರು ಮತ್ತು ಬಿಸಿಸಿಐ ಆಡಳಿತಾಧಿಕಾರಿಗಳ ಹೆಸರು ಸೂಚಿಸುವ ಜವಾಬ್ದಾರಿ ಇದೀಗ ಬಿಸಿಸಿಐ ಮತ್ತು ಕೇಂದ್ರದ ಹೆಗಲಿಗೇರಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :