ದ.ಆಫ್ರಿಕಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ಸ್ಥಾನ ಕಳೆದುಕೊಂಡ ಕೆಎಲ್ ರಾಹುಲ್

ಮುಂಬೈ| Krishnaveni K| Last Modified ಗುರುವಾರ, 12 ಸೆಪ್ಟಂಬರ್ 2019 (17:15 IST)
ಮುಂಬೈ: ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ 15 ಸದಸ್ಯರ ಬಳಗವನ್ನು ಆಯ್ಕೆ ಸಮಿತಿ ಘೋಷಣೆ ಮಾಡಿದ್ದು, ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಸ್ಥಾನ ಕಳೆದುಕೊಂಡಿದ್ದಾರೆ.

 
ಕಳಪೆ ಪ್ರದರ್ಶನದ ಹಿನ್ನಲೆಯಲ್ಲಿ ರಾಹುಲ್ ಗೆ ಕೊಕ್ ನೀಡುವ ಬಗ್ಗೆ ಈಗಾಗಲೇ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಸುಳಿವು ನೀಡಿದ್ದರು. ಅದರಂತೆ ರಾಹುಲ್ ಸ್ಥಾನ ಕಳೆದುಕೊಂಡಿದ್ದು ಅವರ ಬದಲು ಶಬ್ನಂ ಗಿಲ್ ಗೆ ಮೊದಲ ಬಾರಿಗೆ ಟೀಂ ಇಂಡಿಯಾ ಪರ ಆಡುವ  ಅವಕಾಶ ನೀಡಲಾಗಿದೆ.
 
ರೋಹಿತ್ ಶರ್ಮಾಗೂ ಸ್ಥಾನ ನೀಡಲಾಗಿದ್ದು, ರಾಹುಲ್ ಬದಲಿಗೆ ಅವರೇ ಈ ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಒಟ್ಟು 15 ಸದಸ್ಯರ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ನಾಯಕರಾಗಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :