ಟೆಸ್ಟ್ ಚಾಂಪಿಯನ್ ಶಿಪ್ ಗೆ ಟೀಂ ಇಂಡಿಯಾಗೆ ಹೊಸ ಜೆರ್ಸಿ

ಆಂಟಿಗುವಾ| Krishnaveni K| Last Modified ಗುರುವಾರ, 22 ಆಗಸ್ಟ್ 2019 (09:09 IST)
ಆಂಟಿಗುವಾ: ಟೆಸ್ಟ್ ಕ್ರಿಕೆಟ್ ಎಂದರೆ ಎಲ್ಲಾ ರಾಷ್ಟ್ರದ ಆಟಗಾರರಿಗೂ ಒಂದೇ ಥರದ ಬಿಳಿ ಜೆರ್ಸಿ. ಇದು ಹಲವು ವರ್ಷಗಳಿಂದಲೂ ನಡೆದು ಬಂದ ಪದ್ಧತಿ. ಆದರೆ ಇದು ಇಂದಿನಿಂದ ಆರಂಭವಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಬದಲಾಗಿದೆ.

 
ಟೀಂ ಇಂಡಿಯಾ ಕ್ರಿಕೆಟಿಗರಿಗೆ ಹೊಸ ಜೆರ್ಸಿ ಸಿಕ್ಕಿದ್ದು, ಬಣ್ಣವೇನೋ ಬಿಳಿಯಾಗಿದೆ. ಆದರೆ ಇದರ ಜತೆಗೆ ಜೆರ್ಸಿಯಲ್ಲಿ ಆಟಗಾರರ ಹೆಸರು ಮತ್ತು ಕ್ರಮ ಸಂಖ್ಯೆಯೂ ಇರಲಿದೆ.
 
ಹೊಸ ಜೆರ್ಸಿಯೊಂದಿಗೆ ಟೀಂ ಇಂಡಿಯಾ ಆಟಗಾರರು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಟೆಸ್ಟ್ ಚಾಂಪಿಯನ್ ಶಿಪ್ ಆಡುವ ಎಲ್ಲಾ ತಂಡದ ಆಟಗಾರರೂ ಇನ್ನು ಮುಂದೆ ಈ ರೀತಿಯ ಜೆರ್ಸಿ ತೊಡಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :