ಮತ್ತೊಂದು ಸರಣಿಯೂ ಟೀಂ ಇಂಡಿಯಾ ಪಾಲು

ಪುಣೆ| Krishnaveni K| Last Modified ಶನಿವಾರ, 11 ಜನವರಿ 2020 (08:46 IST)
ಪುಣೆ: ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇದರೊಂದಿಗೆ ಮತ್ತೊಂದು ಸರಣಿ ಭಾರತದ ಪಾಲಾಗಿದೆ.

 
ಮೂರನೇ ಪಂದ್ಯವನ್ನು ಟೀಂ ಇಂಡಿಯಾ 78 ರನ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕರ ಅಬ್ಬರದಿಂದಾಗಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಕೆಎಲ್ ರಾಹುಲ್ 54 ಮತ್ತು ಶಿಖರ್ ಧವನ್ 52 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮನೀಶ್ ಪಾಂಡೆ ಅಜೇಯ 31 ರನ್ ಗಳಿಸಿದರೆ ಕೊನೆಯಲ್ಲಿ ಬಂದ ಶ್ರಾದ್ಧೂಲ್ ಠಾಕೂರ್ ಅಜೇಯ 22 ರನ್ ಗಳಿಸಿದರು.
 
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಲಂಕಾ ಆರಂಭದಿಂದಲೇ ಎಡವಿತು. ಮಧ್ಯಮ ಕ್ರಮಾಂಕದಲ್ಲಿ ಏಂಜಲೋ ಮ್ಯಾಥ್ಯೂಸ್ 31 ಮತ್ತು ಧನಂಜಯ ಡಿ ಸಿಲ್ವ 57 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾರೂ ಎರಡಂಕಿ ಮೊತ್ತ ದಾಟಲಿಲ್ಲ. 15.5 ಓವರ್ ಗಳಲ್ಲಿ 123 ರನ್ ಗಳಿಗೆ ಆಲೌಟ್ ಆದ ಲಂಕಾ 78 ರನ್ ಗಳಿಂದ ಸೋಲನುಭವಿಸಿತು. ಭಾರತದ ಪರ ನವದೀಪ್ ಸೈನಿ 3, ಶ್ರಾದ್ಧೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಕಬಳಿಸಿದರೆ ಜಸ್ಪ್ರೀತ್ ಬುಮ್ರಾ 1 ವಿಕೆಟ್ ತಮ್ಮದಾಗಿಸಿಕೊಂಡರು.
ಇದರಲ್ಲಿ ಇನ್ನಷ್ಟು ಓದಿ :