ಟೀಂ ಇಂಡಿಯಾ ಜತೆಗೆ ಟೆಸ್ಟ್ ಆಡೋದು ಅಂದ್ರೆ ಆಸೀಸ್ ನಾಯಕನಿಗೆ ಬಾಯಲ್ಲಿ ನೀರೂರುತ್ತಂತೆ!

ಸಿಡ್ನಿ| Krishnaveni K| Last Modified ಮಂಗಳವಾರ, 7 ಜನವರಿ 2020 (09:53 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಎಂದರೆ ಯಾವ ರೀತಿಯಲ್ಲೂ ರೋಚಕತೆಗೆ ಕಡಿಮೆಯಿಲ್ಲ. ಈ ಸರಣಿ ಈ ವರ್ಷ ಕೆಲವೇ ದಿನಗಳಲ್ಲಿ ನಡೆಯಲಿದೆ.

 
ಇದಕ್ಕೂ ಮೊದಲು ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್ ಹೇಳಿಕೆ ನೀಡಿದ್ದು, ಭಾರತದ ಎದುರಿಗಿನ ಟೆಸ್ಟ್ ಎಂದರೇ ಬಾಯಲ್ಲಿ ನೀರೂರುತ್ತೆ ಎಂದಿದ್ದಾರೆ.
 
‘ವಿಶ್ವ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಅಗ್ರ ಎರಡು ಸ್ಥಾನಗಳಲ್ಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕಾಳಗ ಯಾವತ್ತೂ ರೋಚಕವಾಗಿರುತ್ತದೆ. ಈ ಸರಣಿಯಲ್ಲಿ ಆಡುವುದು ಎಂದರೇ ಬಾಯಲ್ಲಿ ನೀರೂರುತ್ತದೆ. ಎರಡೂ ತಂಡಗಳ ನಡುವಿನ ಕದನವೇ ಅಂತಹದ್ದು’ ಎಂದು ಪೇಯ್ನ್ ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :