ಸಹ ಆಟಗಾರರ ಬಗ್ಗೆ ತುಂಬಾ ಕೇರ್ ತಗೊಳ್ತಾರಂತೆ ವಿರಾಟ್ ಕೊಹ್ಲಿ

ಮೆಲ್ಬೋರ್ನ್| Krishnaveni K| Last Modified ಶನಿವಾರ, 19 ಜನವರಿ 2019 (09:41 IST)
ಮೆಲ್ಬೋರ್ನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿ ವರ್ತನೆಯಿಂದ ಹೆಸರುವಾಸಿ. ಆದರೆ ಮೈದಾನದಿಂದ ಹೊರಗೆ ಹೋದರೆ ಅವರು ಅಷ್ಟೇ ಸ್ನೇಹ ಜೀವಿ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೊಗಳಿದ್ದಾರೆ.
  ಸಂದರ್ಶನವೊಂದರಲ್ಲಿ ಮಾತನಾಡಿದ ಶಾಸ್ತ್ರಿ, ‘ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದಾಗ ನಾನು ಕೊಹ್ಲಿ ನಿಜಕ್ಕೂ ಜಂಟಲ್ ಮೆನ್ ಎಂದರೆ ಅಲ್ಲಿನ ಮಾಧ್ಯಮಗಳು ಶಾಕ್ ಆಗಿದ್ದವು. ಆದರೆ ಅದೇ ನಿಜ. ಮೈದಾನದಲ್ಲಿ ನೀವು ಕಾಣುವ ಕೊಹ್ಲಿಗೂ ಮೈದಾನದ ಹೊರಗೆ ಇರುವ ಕೊಹ್ಲಿಗೂ ವ್ಯತ್ಯಾಸವಿದೆ’ ಎಂದಿದ್ದಾರೆ.>  > ‘ಮೈದಾನದಂದ ಹೊರಗೆ ಹೋದರೆ ಕೊಹ್ಲಿ ಸ್ನೇಹ ಜೀವಿ. ಅಂತಹ ಸ್ನೇಹ ಜೀವಿಯನ್ನು ನೀವು ಬೇರೆಲ್ಲೂ ಕಂಡಿರಲಿಕ್ಕಿಲ್ಲ. ಅಷ್ಟು ಒಳ್ಳೆಯ ವ್ಯಕ್ತಿ. ತಮ್ಮ ತಂಡದ ಸಹವರ್ತಿಗಳ ಬಗ್ಗೆ ತುಂಬಾ ಕೇರ್ ಮಾಡ್ತಾರೆ. ಹಾಗೆಯೇ ಇನ್ನೊಬ್ಬರಿಗೆ ರೋಲ್ ಮಾಡೆಲ್ ಆಗಿ ನಡೆದುಕೊಳ್ತಾರೆ. ಇಂತಹ ವ್ಯಕ್ತಿಯ ಜತೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳಲು ನನಗೆ ಹೆಮ್ಮೆಯೆನಿಸುತ್ತದೆ’ ಎಂದು ರವಿಶಾಸ್ತ್ರಿ ನಾಯಕನ ಗುಣಗಾನ ಮಾಡಿದ್ದಾರೆ.  
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :