ಸಹಾಯಕ ಸಿಬ್ಬಂದಿಗಳ ಆಯ್ಕೆ ವಿಚಾರದಲ್ಲಿ ವಿರಾಟ್ ಕೊಹ್ಲಿ-ರವಿಶಾಸ್ತ್ರಿ ನಡುವೆ ಭಿನ್ನಾಭಿಪ್ರಾಯ

ಮುಂಬೈ| Krishnaveni K| Last Modified ಮಂಗಳವಾರ, 3 ಸೆಪ್ಟಂಬರ್ 2019 (09:34 IST)
ಮುಂಬೈ: ಟೀಂ ಇಂಡಿಯಾಗೆ ಮತ್ತೊಮ್ಮೆ ಕೋಚ್ ಆಗಿ ರವಿಶಾಸ್ತ್ರಿಯೇ ಪುನರಾಯ್ಕೆಯಾದ ಬಳಿಕ ಇದೀಗ ಸಹಾಯಕ ಸಿಬ್ಬಂದಿಗಳ ಆಯ್ಕೆ ಪ್ರಕ್ರಿಯೆಯನ್ನು ಬಿಸಿಸಿಐ ಮಾಡುತ್ತಿದೆ.

 

ಈ ನಡುವೆ ಸಹಾಯಕ ಸಿಬ್ಬಂದಿ ಆಯ್ಕೆ ವಿಚಾರದಲ್ಲಿ ನಾಯಕ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗಿದೆ. ಬಿಸಿಸಿಐ ಸದ್ಯಕ್ಕೆ ನಿಕ್ ವೆಬ್, ಲ್ಯೂಕ್ ವುಡ್ ಹೌಸ್ ಮತ್ತು ರಜನೀಕಾಂತ್ ಶಿವಜ್ಞಾನಮ್ ಎಂಬ ಮೂವರು ಸಹಾಯಕ ಸಿಬ್ಬಂದಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಇವರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೋಚ್ ಮತ್ತು ನಾಯಕನ ಅಭಿಪ್ರಾಯ ಕೇಳಿದೆ.
 
ಆದರೆ ರವಿಶಾಸ್ತ್ರಿ ಸಹಾಯಕ ಸಿಬ್ಬಂದಿಯಾಗಿ ಭಾರತೀಯರೇ ಇರಲಿ ಎಂದು ಆಗ್ರಹಿಸಿದರೆ, ಕೊಹ್ಲಿ ದೇಶ ಮುಖ್ಯವಲ್ಲ, ಅತ್ಯುತ್ತಮ ಸಿಬ್ಬಂದಿಗಳನ್ನು ಕೊಡಿ ಎಂದು ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಬ್ಬರೂ ಈ ವಿಚಾರದಲ್ಲಿ ಅಭಿಪ್ರಾಯ ವೈರುಧ್ಯ ಹೊಂದಿದ್ದಾರೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :