ಟೀಂ ಇಂಡಿಯಾಗೆ ಕೊರೋನಾ ಹರಡಿದ ಬುಕ್ ಲಾಂಚ್ ಕಾರ್ಯಕ್ರಮದಲ್ಲಿ ಅಸಲಿಗೆ ನಡೆದಿದ್ದೇನು?!

ಲಂಡನ್| Krishnaveni K| Last Modified ಶನಿವಾರ, 11 ಸೆಪ್ಟಂಬರ್ 2021 (10:54 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಸೇರಿದಂತೆ ಸಹಾಯಕ ಸಿಬ್ಬಂದಿಗೆ ಕೊರೋನಾ ಸೋಂಕು ಹರಡಲು ಕಾರಣವಾಗಿದ್ದು ಅವರು ತೆರಳಿದ್ದ ಬುಕ್ ಲಾಂಚ್ ಕಾರ್ಯಕ್ರಮ ಎನ್ನಲಾಗಿದೆ.
 > ಈ ಕಾರ್ಯಕ್ರಮಕ್ಕೆ ರವಿಶಾಸ್ತ್ರಿ ಹೋದಾಗ ಅಸಲಿಗೆ ಅಲ್ಲಿ ನಡೆದಿದ್ದೇನು ಗೊತ್ತಾ? ಇದನ್ನು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ತೆರಳಿದ್ದ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಯನ್ನು ಹಲವರು ಹತ್ತಿರ ಬಂದು ಮಾತನಾಡಿಸಿದ್ದರು. ಎಲ್ಲರೂ ಅವರ ಬಳಿ ತೆರಳಲು ಮುಗಿಬಿದ್ದರು. ಆ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳನ್ನು ಬಿಟ್ಟರೆ ಉಳಿದವರು ಯಾರೂ ಮಾಸ್ಕ್ ಧರಿಸಿರಲಿಲ್ಲ.>   ಜೊತೆಗೆ ಸಾಮಾಜಿಕ ಅಂತರವೂ ಇರಲಿಲ್ಲ. ಈ ಉಡಾಫೆಯಿಂದಲೇ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತು ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :