ರೋಹಿತ್ ಶರ್ಮಾ ಬಂದಾಗ ಕೆಎಲ್ ರಾಹುಲ್ ಸೈಡ್ ಲೈನ್ ಆಗೋದು ಪಕ್ಕಾ!

ಮುಂಬೈ| Krishnaveni K| Last Modified ಸೋಮವಾರ, 13 ಜನವರಿ 2020 (09:06 IST)
ಮುಂಬೈ: ಟೀಂ ಇಂಡಿಯಾದಲ್ಲಿ ಇದೀಗ ಆರಂಭಿಕ ಸ್ಥಾನಕ್ಕೆ ಭರ್ಜರಿ ಫೈಟ್ ಶುರುವಾಗಿದೆ. ಕೆಎಲ್ ರಾಹುಲ್ ಆರಂಭಿಕರಾಗಿ ಕ್ಲಿಕ್ ಆದ ಬಳಿಕ ಇದೀಗ ಧವನ್, ರೋಹಿತ್ ಮತ್ತು ರಾಹುಲ್ ನಡುವೆ ಆರಂಭಿಕ ಸ್ಥಾನಕ್ಕೆ ಪೈಪೋಟಿಯಿದೆ.

 
ಆದರೆ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ರೋಹಿತ್ ಶರ್ಮಾ ಬಂದ ಮೇಲೆ ಆರಂಭಿಕ ಸ್ಥಾನಕ್ಕೆ ಅವರಿಗೆ ಸ್ಥಾನ ಖಚಿತ ಎಂದಿದ್ದಾರೆ. ಹಾಗಂತ ರಾಹುಲ್ ನಿರಾಶರಾಗಬೇಕಿಲ್ಲ.
 
ಯಾಕೆಂದರೆ ಎರಡನೇ ಆರಂಭಿಕರ ಸ್ಥಾನಕ್ಕೆ ಶಿಖರ್ ಧವನ್ ಮತ್ತು ಕೆಎಲ್ ರಾಹುಲ್ ಸ್ಪರ್ಧೆ ನಡೆಸಲಿದ್ದಾರೆ ಎಂದಿದ್ದಾರೆ. ಹೀಗಾಗಿ ಧವನ್ ಗೂ ಸ್ಥಾನ ಖಾಯಂ ಅಲ್ಲ ಎಂಬ ಸೂಚನೆ ನೀಡಿದ್ದಾರೆ. ಹೀಗಾಗಿ ಈಗ ಧವನ್ ಮತ್ತು ರಾಹುಲ್ ನಡುವೆ ಅಂತಿಮ ಫೈಟ್ ಇದೆ. ಇವರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಂಗಳವಾರದಿಂದ ನಡೆಯಲಿರುವ ಏಕದಿನ ಸರಣಿಯಲ್ಲಿ ಯಾರು ಅವಕಾಶ ಗಿಟ್ಟಿಸುತ್ತಾರೋ ಕಾದು ನೋಡಬೇಕು.
ಇದರಲ್ಲಿ ಇನ್ನಷ್ಟು ಓದಿ :